





ಪುತ್ತೂರು: ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶ್ರೀಶ ಕುಮಾರ್ ಮತ್ತು ಕು. ಸಹನಾರವರು 2022-23ನೇ ಸಾಲಿನಲ್ಲಿ 8ನೇ ತರಗತಿಯ ವಿದ್ಯಾರ್ಥಿಗಳಿಗೆ ನಡೆದ ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದಿನ ನಾಲ್ಕು ವರ್ಷ ವಿದ್ಯಾರ್ಥಿ ವೇತನ ಪಡೆಯಲು ಅರ್ಹರಾಗಿದ್ದಾರೆ.


ಶ್ರೀಶ ಕುಮಾರ್ ಅವರು ಕೋಡಿಂಬಾಡಿ ಗ್ರಾಮದ ಕೃಷ್ಣಗಿರಿಯ ಆನಂದ ಮತ್ತು ಶಶಿಕಲಾ ದಂಪತಿಯ ಪುತ್ರ. ಸಹನಾರವರು ನೆಕ್ಕಿಲಾಡಿ ಗ್ರಾಮದ ಶಾಂತಿನಗರದ ಲೋಕೇಶ್ ಮತ್ತು ಜಾನಕಿಯವರ ಪುತ್ರಿ.














