ಪಾಣಾಜೆ: ಪಾಣಾಜೆ ಗ್ರಾಮದ ಸೂರಂಬೈಲು ಬಾರಿಕೆ ತರವಾಡು ಶ್ರೀ ಮಲರಾಯಿ ದೈವಸ್ಥಾನ ದಲ್ಲಿ ಧರ್ಮದೈವಗಳ ನೇಮೋತ್ಸವಾದಿಗಳು ಏ. 28 ರಂದು ಆರಂಭಗೊಂಡಿವೆ. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದೊಂದಿಗೆ ವೇ.ಮೂ.ದಿನೇಶ್ ಮರಡಿತ್ತಾಯರ ಪೌರೋಹಿತ್ಯದಲ್ಲಿ ಸೂರಂಬೈಲು ಮೂಲ ತರವಾಡಿಗೆ ಕಾಮಜಾಲು ಕುಟುಂಬಸ್ಥರ ಸೇರ್ಪಡೆಯ ಪ್ರಯುಕ್ತ ಧರ್ಮದೈವಗಳ ನೇಮೋತ್ಸವಾದಿಗಳು ನಡೆಯುತ್ತಿದ್ದು, ಏ. 29 ರಂದು ಬೆ.9ರಿಂದ ರಾಜನ್ ದೈವ ನೇಮ ಅನ್ನಸಂತರ್ಪಣೆ, ಮಧ್ಯಾಹ್ನ ವರ್ಣರ ಪಂಜುರ್ಲಿ ದೈವದ ನೇಮ, ಸಂಜೆ ಕಲ್ಲುರ್ಟಿ ದೈವದ ನೇಮ, ರಾತ್ರಿ ಅನ್ನಸಂತರ್ಪಣೆ, ಕೊರತಿ ದೈವದ ನೇಮ ಜರಗಿತು.
ಏ. 30ರಂದು ಬೆಳಿಗ್ಗೆ ಭಂಡಾರ ಇಳಿಸಿದ ನಂತರ ಧರ್ಮದೈವ ಶ್ರೀ ಮಲರಾಯಿ ದೈವದ ನೇಮ ನಡೆದು ಅನ್ನಸಂತರ್ಪಣೆ ನೆರವೇರಿತು. ಸೂರಂಬೈಲು ಯಜಮಾನ ನಾರಾಯಣ ರೈ, ಆನಂದ ರೈ ಮತ್ತು ಸೂರಂಬೈಲು ಕುಟುಂಬಿಕರು, ಕಾಮಜಾಲು ಕುಟುಂಬದ ಬಾಲಕೃಷ್ಣ ಶೆಟ್ಟಿ ಮತ್ತು ಕುಟುಂಬಿಕರು, ವಿವಿಧ ಮನೆತನಗಳ ಯಜಮಾನರು, ಕುಟುಂಬಿಕರು, ಬಂಧು ಮಿತ್ರರು, ಗ್ರಾಮಸ್ಥರು ಪಾಲ್ಗೊಂಡು ದೈವದ ಪ್ರಸಾದ ಸ್ವೀಕರಿಸಿದರು.