ಕಾರ್ಮಿಕರ ಕಡೆಗಣಿಸದಿರಿ.

0


ಕಡೆದ ಮೇಲಷ್ಟೇ ಬೆಣ್ಣೆ, ತುಪ್ಪ
ಇಲ್ಲವೆಂದರೆ ಬರಿಯ ಮೊಸರು
ಪ್ರಗತಿ ಚಕ್ರದ ಉರುಳಿನಲ್ಲಿಹುದು
ದುಡಿದ ಕಾರ್ಮಿಕರ ಬೆವರು

ಹೊಟ್ಟೆ ಪಾಡು ಆದರೂನೂ
ಅಮಿತ ನಿಷ್ಠೆ ಅವನೊಳು!
ಕಾಲ ತುರ್ತಿಗೆ ಒದಗಿಬರುವ
ಯೋಗಿಯವನು ಜಗದೊಳು!

ಜಗಿದ ಮೇಲೆ ಉಗಿವ ಜಲ್ಲೆ
ಅಲ್ಲ ಶ್ರಮಿಕ ಕಾರ್ಮಿಕ!
ಜೀವ ಭಾವ ಭರಿತ ಕಾಯ
ಹೃದಯ ಪ್ರೀತಿ ವಾಹಕ!

ಶ್ರಮಿಕ ವರ್ಗದೆಡೆಗೂ ಇರಲಿ
ಸದಾ ಪ್ರೀತಿ ಗೌರವ!
ಅವರ ದುಡಿಮೆಯಿಂದಲಷ್ಟೇ
ಲೋಕದ ಎಲ್ಲಾ ವೈಭವ!

ನಮ್ಮ ಮನೆಯ ಮಗನ ಹಾಗೆ
ನಗೆಯ ಹಂಚಿ ಅವನಿಗೂ.
ಕಷ್ಟ ಸುಖದಿ‌ ಭಾಗಿಯಾಗಿ
ಬೆಳಕನೆರೆಯಿರಿ ಬಾಳಿಗೂ!

ಬರಹ : ವಿಶ್ವನಾಥ ಕುಲಾಲ್ ಮಿತ್ತೂರು

LEAVE A REPLY

Please enter your comment!
Please enter your name here