ಪುಣಚದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆ

0

ಬಿಜೆಪಿಗೆ ಬಡವನ ಶಾಪತಟ್ಟಿದೆ,ಇನ್ನೂ ತಟ್ಟಲಿದೆ:ಶಕುಂತಳಾ ಶೆಟ್ಟಿ
ಪುತ್ತೂರು: ಸತ್ಯ,‌ನ್ಯಾಯಕ್ಕೆ ಎಂದೆಂದೂ ಸಾವಿಲ್ಲ, ಯಾರೇ ಆಗಲಿ ಅನ್ಯಾಯ ಮಾಡಿದರೆ ಅದರ ಶಾಪ ತಟ್ಟಿಯೇ ತಟ್ಟುತ್ತದೆ ಎಂಬುದಕ್ಕೆ ಪುತ್ತೂರಿನ ಬಿಜೆಪಿಯೇ ಸಾಕ್ಷಿಯಾಗಿದೆ, ಪುತ್ತೂರು ಬಿಜೆಪಿಗೆ ಬಡವನ ಶಾಪ ತಟ್ಟಿದೆ ಎಂದು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.


ಪುಣಚಾದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.


ಗೋರಕ್ಷಣೆ ಹೆಸರಿನಲ್ಲಿ ಅಮಾಯಕರ ಮೇಲೆ ನಡೆದ ಹಲ್ಲೆ, ಅವಮಾನ ಅದು ಶಾಪವಾಗಿ ತಟ್ಟಿದೆ. ಸಾಕಲು ಕೊಂಡೊಯ್ಯುವ ದನವನ್ನು ತಡೆದು ಹಲ್ಲೆ ನಡೆಸಿ ಅವರ ಕುಟುಂಬದ ಕಣ್ಣೀರು ಸುರಿಸಿದ್ದ ಬಿಜೆಪಿ ಇಂದು ಅದರ ಪರಿಣಾಮವನ್ನು ಅನುಭವಿಸುತ್ತಿದೆ. ಹಿಂದುತ್ವ ಹೆಸರಿನಲ್ಲಿ ಅದೆಷ್ಟು‌ ಮಂದಿಗೆ ಇವರು ಹಲ್ಲೆ ನಡೆಸಿದ್ದಾರೆ ಎಂಬುದನ್ನು ಮೆಲುಕು ಹಾಕಲಿ ಎಂದು ಹೇಳಿದ ಅವರು ಮುಂದಿನ ದಿನಗಳಲ್ಲಿ ಪುತ್ತೂರು ಬಿಜೆಪಿ ಮುಕ್ತವಾಗಲಿದೆ ಎಂದು ಹೇಳಿದರು.


ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೆ ವೇತನ ಹೆಚ್ಚಿಸಿ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ‌ಮಾಡಿದೆ. ಪಕ್ಷವನ್ನು ಬೆಂಬಲಿಸುವಂತೆ ಕರೆ ನೀಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here