ಪುತ್ತೂರು: ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಂ ಕ್ಷೇತ್ರಕ್ಕೆ ಭೇಟಿ ನೀಡಿ ಸ್ವಾಮೀಜಿ ಆಶೀರ್ವಾದ ಪಡೆದರು.

ಮಾಣಿಲ ಶ್ರೀಧಾಮಕ್ಕೆ ತೆರಳಿದ ಅಶೋಕ್ ರೈ ದೇವರ ದರ್ಶನ ಮಾಡಿ, ಆಶೀರ್ವಾದ ಪಡೆದರು.

ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ ಅಶೋಕ್ ರೈ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು.

ಕುಕ್ಕಾಜೆ ಶ್ರೀ ಕಾಳಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ಕೃಷ್ಣ ಗುರೂಜಿಯವರನ್ನು ಭೇಟಿಯಾದ ಅಶೋಕ್ ರೈ ಆಶೀರ್ವಾದ ಪಡೆದರು.

ವಿಟ್ಲ ಅರಮನೆಗೆ ಭೇಟಿ ನೀಡಿದ ಅಶೋಕ್ ರೈ ಹಿರಿಯರ ಆಶೀರ್ವಾದ ಪಡೆದು ಮತ ಯಾಚಿಸಿದರು.

ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು, ಅಭಿಮಾನಿಗಳು, ಹಿತೈಷಿಗಳು ಈ ಎಲ್ಲಾ ಸಂದರ್ಭಗಳಲ್ಲಿ ಉಪಸ್ಥಿತರಿದ್ದರು.