ಎಲ್ಲರೂ ಒಗ್ಗಟ್ಟಾಗಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿಕೊಡಿ- ಜಿ.ಕೃಷ್ಣಪ್ಪ
- ಪಕ್ಷದ ಮೇಲೆ ಪ್ರೀತಿ, ಅಭಿಮಾನದಿಂದ ತೊಡಗಿಸಿಕೊಳ್ಳಬೇಕು- ಸತೀಶ್ ಕುಮಾರ್ ಕೆಡೆಂಜಿ
ಕಾಣಿಯೂರು: ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು ಕಾಣಿಯೂರು, ಬೆಳಂದೂರು, ಸವಣೂರು ಕ್ಷೇತ್ರಗಳಲ್ಲಿ ಕಾರ್ಯಕರ್ತರೊಂದಿಗೆ, ಮತದಾರರೊಂದಿಗೆ ಬಿರುಸಿನ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಭ್ಯರ್ಥಿ ಜಿ.ಕೃಷ್ಣಪ್ಪ ಅವರು, ನಾವೆಲ್ಲರೂ ಒಗ್ಗಟಾಗಿ ಈ ಚುನಾವಣೆಯನ್ನು ಎದುರಿಸಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಿ ಕೊಡುವಲ್ಲಿ ಮಹತ್ವದ ಕಾರ್ಯ ಮಾಡಬೇಕಾಗಿದೆ.
ಸಾಮೂಹಿಕ ನಾಯಕತ್ವವನ್ನು ವಹಿಸಿಕೊಂಡಾಗ ಪಕ್ಷದ ಗೆಲುವಿಗೆ ಕಾರಣವಾಗುತ್ತದೆ. ಪಕ್ಷವನ್ನು ತಳಹಂತದಿಂದ ಬಲ ಪಡಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಬಾಂಧವ್ಯ ಗಟ್ಟಿಯಾಗಬೇಕು. ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಆಯ್ಕೆ ಮಾಡಿದರೆ, ಕ್ಷೇತ್ರದ ಅಭಿವೃದ್ಧಿಗೆ ಮುಂದಾಗುತ್ತೇನೆ. ರಾಜ್ಯದಲ್ಲಿ ಬಿಜೆಪಿ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದಾರೆ ಎಂದರು. ಕೆಪಿಸಿಸಿ ಸದಸ್ಯರಾದ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ಇವತ್ತು ಕಾರ್ಯಕರ್ತರ ಶ್ರಮದಿಂದ ಕಾಂಗ್ರೆಸ್ ಪಕ್ಷ ಬಲಿಷ್ಠಗೊಳ್ಳುತ್ತಾ ಇದೆ.
ಪಕ್ಷದ ಮೇಲೆ ಪ್ರೀತಿ, ಅಭಿಮಾನದಿಂದ ತೊಡಗಿಸಿಕೊಳ್ಳಬೇಕು. ಪಕ್ಷದಲ್ಲಿದ್ದಾಗ ನಾವು ಪ್ರಾಮಾಣಿಕವಾಗಿ ಕೆಲಸವನ್ನು ಮಾಡಬೇಕು. ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳು, ಯೋಜನೆಗಳು ಕಟ್ಟಕಡೆಯ ಬಡವರಿಂದ ಪ್ರಾರಂಭಗೊಂಡಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆದ್ದು ಬಂದಲ್ಲಿ ಈ ಕ್ಷೇತ್ರದ ಸಮಸ್ಯೆಗಳು ಬಗೆಹರಿಸಲಿವೆ ಎಂದರು.
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಪಿ.ಪಿ. ವರ್ಗೀಸ್ ಕಡಬ, ಶಿವಣ್ಣ ಗೌಡ ಇಡ್ಯಾಡಿ, ತಾ.ಪಂ. ಮಾಜಿ ಉಪಾಧ್ಯಕ್ಷ ಶೀನಪ್ಪ ಗೌಡ ಬೈತಡ್ಕ, ಮಂಗಳೂರು ಸಿಂಡಿಕೇಟ್ ವಿಶ್ವವಿದ್ಯಾನಿಲಯ ಮಾಜಿ ಸದಸ್ಯ ವಿಜಯ ಕುಮಾರ್ ಸೊರಕೆ, ಕನಕಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂಪಂಗಿ, ಬೆಳಂದೂರು ಗ್ರಾ.ಪಂ. ಮಾಜಿ ಅಧ್ಯಕ್ಷ ನಾರಾಯಣ ಗೌಡ ಬೈತಡ್ಕ, ಬೆಳಂದೂರು ಗ್ರಾ.ಪಂ.ಉಪಾಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಸದಸ್ಯರಾದ ವಿಠಲ ಗೌಡ ಅಗಳಿ, ಹರಿಣಾಕ್ಷಿ ಬನಾರಿ, ಶ್ರೀಧರ ರೈ ಮಾದೋಡಿ, ಸುದರ್ಶನ್ ಕಂಪ, ಧರ್ಮಪ್ರಕಾಶ್ ಪುಣ್ಚಪ್ಪಾಡಿ, ವಿಶ್ವನಾಥ ರೈ ಮಾಳ, ಕಿಟ್ಟಣ್ಣ ರೈ ಪಾಲ್ತಾಡಿ, ಅವಿನಾಶ್ ಬೈತಡ್ಕ, ರಫಿಕ್ ಮಾಂತೂರು, ನಝೀರ್ ಮಾಂತೂರು, ನಝೀರ್ ದೇವಸ್ಯ, ಬಾಲಕೃಷ್ಣ ಗೌಡ ಕೋಳಿಗದ್ದೆ ಮತ್ತಿತರರು ಉಪಸ್ಥಿತರಿದ್ದರು.