ವಿಧಾನಸಭಾ ಚುನಾವಣೆ: 2 ದಿನಗಳಲ್ಲಿ 1231 ಮಂದಿಯಿಂದ ಮನೆಯಲ್ಲೇ ಮತದಾನ

0

ಪುತ್ತೂರು:ವಿಧಾನಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಚುನಾವಣಾ ಆಯೋಗದ ನಿರ್ದೇಶನದಂತೆ, 80 ವರ್ಷಕ್ಕೆ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನ(ಪಿಡಬ್ಲ್ಯುಡಿ) ಮತ್ತು ಕೋವಿಡ್ ಪೀಡಿತರಿಗೆ ಅವರವರ ಮನೆಯಲ್ಲೇ ಕುಳಿತು ಮತ ಚಲಾಯಿಸುವ ಪ್ರಕ್ರಿಯೆಗಳು ಮೇ1ರಂದು ಪ್ರಾರಂಭಗೊಂಡಿದ್ದು ಎರಡು ದಿನಗಳಲ್ಲಿ 1231 ಮತ ಚಲಾವಣೆಯಾಗಿದೆ.

ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 1597 ಮಂದಿ ಮತದಾರರು ಮನೆಯಲ್ಲಿಯೇ ಮತದಾನಕ್ಕೆ ಅರ್ಜಿ ಸಲ್ಲಿಸಿದ್ದು ಮೇ1ರಂದು 606 ಹಾಗೂ ಮೇ2ರಂದು 625 ಮಂದಿ ಮತಚಲಾಯಿಸಿದ್ದಾರೆ. ಚುನಾವಣೆಗೆ ನಿಯೋಜಿಸಲ್ಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಗಳು ಮತದಾರರ ಮನೆಗಳಿಗೆ ತೆರಳಿ ಮತದಾನ ಪ್ರಕ್ರಿಯೆಯಲ್ಲಿ ಸಹಕರಿಸಿದರು.

ಇಂದು ಕಡೇ ದಿನ: 80 ವರ್ಷಕ್ಕೆ ಮೇಲ್ಪಟ್ಟ ಹಿರಿಯ ನಾಗರಿಕರು, ವಿಕಲಚೇತನ(ಪಿಡಬ್ಲ್ಯುಡಿ) ಮತ್ತು ಕೋವಿಡ್ ಪೀಡಿತರಿಗೆ ಅವರವರ ಮನೆಯಲ್ಲೇ ಮತ ಚಲಾಯಿಸುವ ಪ್ರಕ್ರಿಯೆ ಮೇ3ರಂದು ಕೊನೆಗೊಳ್ಳಲಿದೆ.

LEAVE A REPLY

Please enter your comment!
Please enter your name here