ವಿಧಾನ ಸಭಾ ಚುನಾವಣೆ:ಪಿ.ಆರ್.ಒ, ಎ.ಪಿ.ಆರ್.ಓಗಳಿಗೆ ಮತದಾನ

0

ಪುತ್ತೂರು:ಮೇ 10ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನೇಮಕವಾದ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ಪಿ.ಆರ್.ಓ ಹಾಗೂ ಎ.ಪಿ.ಆರ್.ಓಗಳಿಗೆ ಅಂಚೆ ಮತದಾನ ಪ್ರಕ್ರಿಯೆ ಎ.30ರಂದು ನಡೆಯಿತು. ತೆಂಕಿಲ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪೋಲಿಂಗ್ ತರಬೇತಿಯ ಸಂದರ್ಭದಲ್ಲಿ ಮತ ಚಲಾವಣೆಗೆ ಅವಕಾಶ ಕಲ್ಪಿಸಲಾಗಿತ್ತು. ಮತದಾನ ಕೇಂದ್ರದಲ್ಲಿಯೇ ತೆರೆಯಲಾದ ಪಿವಿಸಿ ಕೇಂದ್ರಗಳಿಂದ ಮತ ಪತ್ರಗಳನ್ನು ಪಡೆದು ಅಲ್ಲಿಯೇ ಮತ ಚಲಾಯಿಸಿದರು. ಒಟ್ಟು 1300 ಮತದಾರರ ಪೈಕಿ ಪುತ್ತೂರು ವಿಧಾನ ಸಭಾ ಕ್ಷೇತ್ರದ 417 ಮಂದಿ ಮತಚಲಾಯಿಸಿದರು. ಇತರೇ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಕಾರ್ಯ ನಿಮಿತ್ತ ನೇಮಕವಾದ ಅಧಿಕಾರಿ/ ಸಿಬ್ಬಂದಿ ವರ್ಗದವರೂ ಅಂಚೆ ಮತದಾನದ ಮೂಲಕ ಚಲಾಯಿಸಿದರು.

ಅಗತ್ಯ ಸೇವೆಯಡಿ ಕರ್ತವ್ಯ ನಿರ್ವಹಿಸುವವರಿಗೆ ಮತದಾನ: ಕರ್ನಾಟಕ ವಿಧಾನ ಸಭಾ ಚುನಾವಣೆಯ ಸಂದರ್ಭದಲ್ಲಿ ಅಗತ್ಯ ಸೇವೆಯಡಿ ಕರ್ತವ್ಯ ನಿರ್ವಹಿಸುವ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಿಬಂದಿಗಳಿಗೆ ಮತದಾನ ಪ್ರಕ್ರಿಯೆ ಮೇ2ರಂದು ಪ್ರಾರಂಭಗೊಂಡಿದೆ.

ತಾಲೂಕು ಆಡಳಿತ ಸೌಧದಲ್ಲಿ ತೆರೆಯಲಾಗಿರುವ ಮತದಾನ ಕೇಂದ್ರದಲ್ಲಿ ಮತದಾನ ಪ್ರಕ್ರಿಯೆಗಳು ನಡೆಯುತ್ತಿದೆ. ಕೆ.ಎಸ್.ಆರ್.ಟಿ.ಸಿ., ಸಂಚಾರಿ ಪೊಲೀಸ್, ಮೆಸ್ಕಾಂ ಹಾಗೂ ಆರೋಗ್ಯ ಇಲಾಖೆಯ ಒಟ್ಟು 30 ಮಂದಿ ಅಧಿಕಾರಿ ಹಾಗೂ ಸಿಬಂದಿಗಳು ಮತ ಚಲಾಯಿಸಲಿದ್ದು ಪ್ರಥಮ ದಿನವಾದ ಮೇ2ರಂದು 9 ಮಂದಿ ಮತ ಚಲಾಯಿಸಿದ್ದಾರೆ.

LEAVE A REPLY

Please enter your comment!
Please enter your name here