ಉಪ್ಪಿನಂಗಡಿ: ಅಪಘಾತಕ್ಕೀಡಾಗಿ ಭಾರೀ ಮೊತ್ತದ ಚಿಕಿತ್ಸೆಗೆ ತುತ್ತಾದ ಬಡ ಯುವಕನ ಚಿಕಿತ್ಸೆಗೆ ಸಹಕರಿಸುವಲ್ಲಿ ಮಾನವೀಯ ಸ್ಪಂದನ ತೋರಿದ ಉಪ್ಪಿನಂಗಡಿಯ ಸಹೃದಯರು ಕೇವಲ ಮೂರೇ ದಿನಗಳಲ್ಲಿ 2.71 ಲಕ್ಷ ರೂ ಮೊತ್ತವನ್ನು ಸಂಗ್ರಹಿಸಿ ಬಡ ಕುಟುಂಬಕ್ಕೆ ಹಸ್ತಾಂತರಗೊಳಿಸಿದ್ದಾರೆ.
ಉಪ್ಪಿನಂಗಡಿಯ ರಥಬೀದಿಯ ನಿವಾಸಿ ಗೀತಾ ಪೈ ಎಂಬವರ ಮಗ ಗೌತಮ್ ಪೈ ಮನೆ ದುರಸ್ತಿ ಸಂಧರ್ಭದಲ್ಲಿ ಅಪಘಾತಕ್ಕೀಡಾಗಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಮೊತ್ತ ಪಾವತಿಸಲಾಗದ ಸ್ಥಿತಿಯಲ್ಲಿದ್ದು, ಅಸಹಾಯಕರಾಗಿದ್ದ ಕುಟುಂಬದ ಸಂಕಷ್ಠವನ್ನು ಅರಿತ ಉಪ್ಪಿನಂಗಡಿಯ ಗ್ರಾಮ ಪಂಚಾಯತ್ ಸದಸ್ಯ ವಿನಾಯಕ ಪೈ, ಹಾಗೂ ಇಲ್ಲಿನ ಕಾಮತ್ ಕೋಲ್ಡ್ ಹೌಸ್ ಮಾಲಕ ಸಂತೋಷ್ ಕಾಮತ್, ಎಚ್. ವಿನಾಯಕ್ ಪ್ರಭು , ಶಾಂತಾರಾಮ ಶೆಣೈ ಮತ್ತಿತರ ಯುವಕರು ಗೌತಮ್ ಪೈಯ ಚಿಕಿತ್ಸೆಗೆ ಧನ ಸಹಾಯದ ಅಗತ್ಯತೆಯ ಬಗ್ಗೆ `ಅಮ್ಲ್ಗೆಲೆ ಚೆರ್ಕೇ… ಸೋಲಿಡ್’ ಎಂಬ ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶ ರವಾನಿಸುತ್ತಾರೆ. ಕ್ಷಿಪ್ರ ಸ್ಪಂದನ ತೋರಿದ ದಿವ್ಯಾ ಸುಧೀಂದ್ರ ನಾಯಕ್, ಯು. ಇಂದಿರಾ ವೆಂಕಟೇಶ್ ಭಟ್, ಕರಾಯ ಗಣೇಶ್ ನಾಯಕ್ ಮತ್ತಿತರ ಮಂದಿ ಶಕ್ತ್ಯಾನುಸಾರ ಸಹಾಯಧನವನ್ನು ನೀಡಿದ ಕಾರಣ ಚಿಕಿತ್ಸಾ ಮೊತ್ತಕ್ಕೆ ಅಗತ್ಯವಾದ ರೂ 2,71,760 ಸಂಗ್ರಹಿಸಲ್ಪಟ್ಟಿತ್ತು. ಸದ್ರಿ ಮೊತ್ತವನ್ನು ಗೌತಮ್ ಪೈಯವರ ತಾಯಿಗೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಳದ ಆಡಳಿತ ಮಂಡಳಿಯ ಮಾಜಿ ಮೊಕ್ತೇಸರರಾದ ಕೆ. ಗಣೇಶ್ ನಾಯಕ್ ರವರ ನೇತೃತ್ವದ ತಂಡವು ಶೀಘ್ರ ಗುಣಮುಖರಾಗುವ ಪ್ರಾರ್ಥನೆ ಸಲ್ಲಿಸಿತು.
ಈ ಸಂಧರ್ಭದಲ್ಲಿ ಪ್ರಮುಖರಾದ ಸಂತೋಷ್ ಕಾಮತ್, ವಿವೇಕಾನಂದ ಪ್ರಭು, ವಿನಾಯಕ್ ಪೈ, ಕೆ ರಾಘವೇಂದ್ರ ನಾಯಕ್, ದಾಮೋದರ್ ಭಂಡಾರ್ಕರ್, ಅನಂತರಾಯ ಕಿಣಿ, ಮಂಜುನಾಥ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.