ಮೇ 6: ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಪರ ಮತ ಪ್ರಚಾರ- ಪುತ್ತೂರಿನಲ್ಲಿ ಯೋಗಿ ಆದಿತ್ಯನಾಥ್ ರೋಡ್ ಶೋ-25 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆ

0

ಪುತ್ತೂರು: ಪ್ರತಿ ಚುನಾವಣೆಯಲ್ಲೂ ಪುತ್ತೂರು ಹೈ ವೋಲ್ಟೇಜ್ ಕ್ಷೇತ್ರ . ಆದರೂ ಬಿಜೆಪಿ ಪ್ರತಿ ಸವಾಲುಗಳನ್ನು ಎದುರಿಸಿ ಗೆಲ್ಲುವ ಕೆಲಸ ಮಾಡಿದೆ. ಅಟಲ್ ಬಿಹಾರಿ ವಾಜಪೇಯಿ ಸಹಿತ ಅನೇಕ ನಾಯಕರು ರಾಮ್ ಭಟ್ ಅವರ ಕಾಲದಿಂದಲೂ ಪುತ್ತೂರಿಗೆ ಆಗಮಿಸಿ ಬಿಜೆಪಿ ಗೆಲುವಾಗಿದೆ‌. ಇದೀಗ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಮತ್ತು ಸುಳ್ಯದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಪರವಾಗಿ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಮೇ 6ಕ್ಕೆ ಪುತ್ತೂರಿಗೆ ಬರಲಿದ್ದಾರೆ. ಪುತ್ತೂರಿನಲ್ಲಿ ಬೆಳಿಗ್ಗೆ11ಗಂಟೆಗೆ ಬೃಹತ್ ರೋಡ್ ಶೋ ನಡೆಯಲಿದೆ ಎಂದು ಶಾಸಕ ಸಂಜೀವ ಮಠಂದೂರು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


ಯೋಗಿಯವರು ಯಾವ ರೀತಿಯ ಆಡಳಿತ ಉತ್ತರ ಪ್ರದೇಶದಲ್ಲಿ ಕೊಟ್ಟಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ನಿಟ್ಟಿನಲ್ಲಿ ರೋಡ್ ಶೋ ದಲ್ಲಿ 25 ಸಾವಿರ ಜನ ಸಾರ್ವಜನಿಕರು ಸೇರಲಿದ್ದಾರೆ. ಪ್ರಧಾನ ಅಂಚೆ ಕಚೆರಿಯಿಂದ ರೋಡ್ ಶೋ ಆರಂಭಗೊಂಡು ಮುಖ್ಯ ರಸ್ತೆಯಿಂದಾಗಿ, ಕೋರ್ಟ್ ರಸ್ತೆಯಾಗಿ, ಕಿಲ್ಲೆ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ. ಯೋಗಿಯವರು ತೆರದ ವಾಹನದಲ್ಲೇ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಮತದಾರರು, ಕಾರ್ಯಕರ್ತರು, ಸಾರ್ವಜನಿಜರು ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದರು.
ಕಾಂಗ್ರೆಸ್ ಕಮ್ಯುನಿಸ್ಟ್ ಮೆಂಟಾಲಿಟಿ:
ರಾಷ್ಟ್ರೀಯ ಕಾಂಗ್ರೆಸ್ ಪಾರ್ಟಿ ಕಮಿನಿಸ್ಟ್ ಮೆಂಟಾಲಿಟಿಯೊಂದಿಗೆ ಹಿಂದು ವಿಚಾರ ಇಟ್ಟಿರುವ ಬಜರಂಗದಳ ಸಂಘಟನೆಯನ್ನು ನಿಷೇಧಿಸುವ ಕುರಿತು ಪ್ರಣಾಳಿಕೆಯಲ್ಲಿ ನೀಡುವ ಮೂಲಕ ಮುಸ್ಲಿಂ ಒಲೈಕೆಯನ್ನು ಸ್ಪಷ್ಟ ಪಡಿಸಿದೆ.‌ ಹಿಂದುಗಳನ್ನು ಧಮನ ಮಾಡಿ ಅಲ್ಪಸಂಖ್ಯಾತರ ಮತ ಒಲೈಸುವ ಹುನ್ನಾರ ನಡೆಸುತ್ತಿದೆ. ಡಿಕೆ ಶಿವಕುಮಾರ್ ಇಂತಹ ವಿಚಾರದಲ್ಲಿ ಕೈ ಹಾಕಿದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಮಾಡುವ ಕೆಲಸ ಮತದಾರರು ಮಾಡಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮದಾಸ್ ಬಂಟ್ವಾಳ್, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here