ಮೇ 6:ಫಿಲೋಮಿನಾದಲ್ಲಿ `ಎಸ್‌ಪಿಎಲ್ ಸೀಸನ್-3′ ಲೀಗ್ ಕ್ರಿಕೆಟ್

0

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಹಾಗೂ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಕಾಲೇಜಿನ ಕ್ರೀಡಾಪಟುಗಳಿಗಾಗಿ ಸಂತ ಫಿಲೋಮಿನಾ ಪ್ರೀಮಿಯರ್ ಲೀಗ್(ಎಸ್‌ಪಿಎಲ್) ಸೀಸನ್-3′ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಮೇ 6 ರಿಂದ ಕಾಲೇಜಿನ ಕ್ರೀಡಾಂಗಣದಲ್ಲಿ ಜರಗಲಿದೆ.

ಕೂಟದಲ್ಲಿ ಫಿಲೋ ಹಾಕ್ಸ್, ಟೀಮ್ ಆಗಸ್ತ್ಯ, ಮ್ಯಾಡ್ ಡೆವಿಲ್ಸ್, ಕ್ಸೇವಿಯನ್ಸ್, ಎಕ್ಸ್69, ಹಾಕ್ಸ್ 14, ಟೀಮ್ ಡಿಬಿಝಡ್, ಅಗ್ನಿ ಬ್ರದರ್ ಹೀಗೆ ಎಂಟು ತಂಡಗಳು ಕಣದಲ್ಲಿದ್ದು, ತಂಡಗಳನ್ನುಎ’ ಹಾಗೂ `ಬಿ’ ಎಂಬಂತೆ ಎರಡು ಗುಂಪುಗಳಲ್ಲಿ ನಾಲ್ಕು ತಂಡಗಳಂತೆ ಹಂಚಿಕೆ ಮಾಡಲಾಗಿದೆ. ಪಂದ್ಯಾಟಗಳು ಫಿಲೋಮಿನಾ ಕ್ರೀಡಾಂಗಣದಲ್ಲಿನ ಎರಡು ಅಂಕಣಗಳಲ್ಲಿ ಏಕಕಾಲದಲ್ಲಿ ನಡೆಯಲಿದ್ದು, ಪಂದ್ಯಾಟಗಳು ಲೀಗ್ ಮಾದರಿಯಲ್ಲಿ ನಡೆಯಲಿದೆ. ಸುಮಾರು 130 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿದ್ದು, ತಂಡಗಳಿಗೆ ಆಟಗಾರರನ್ನು ಬಿಡ್ಡಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಲಾಗಿತ್ತು. ಜೊತೆಗೆ ವಿವಿಧ ಕಲರ್‌ಗಳನ್ನೊಳಗೊಂಡ ಆಯಾ ತಂಡಗಳ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ. ಆಯಾ ತಂಡಗಳಲ್ಲಿ ತಂಡದ ಮಾಲಕರು, ಮ್ಯಾನೇಜರ್, ಮೆಂಟರ್, ಕೋಚ್, ಫಿಸಿಯೋ ಜೊತೆಗೆ ತಲಾ ಈರ್ವರಂತೆ ಐಕಾನ್ ಆಟಗಾರ ಹೊಂದಿರುತ್ತಾರೆ. ಲೀಗ್ ಹಂತದ ಬಳಿಕ ಐಪಿಎಲ್ ನಿಯಮದಂತೆ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್ ಪಂದ್ಯಗಳು ನಡೆಯಲಿವೆ ಎಂದು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಮದ್ ಆಶಿಕ್, ಕಾರ್ಯದರ್ಶಿ ಅನುಶ್ರೀ, ಜೊತೆ ಕಾರ್ಯದರ್ಶಿ ಶಿವಾನಿರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ತಂಡಗಳು/ಮಾಲಕರು…
-ಫಿಲೋ ಹಾಕ್ಸ್(ಮಾಲಕ:ಜೋನ್‌ವಿಸ್ಟನ್ ಡಾಯಸ್/ಶಶಾಂಕ್)
-ಟೀಮ್ ಆಗಸ್ತ್ಯ(ಮಾಲಕ:ಲೋಕೆಂದರ್ ಸಿಂಗ್ ರಾಥೋರ್)
-ಮ್ಯಾಡ್ ಡೆವಿಲ್ಸ್(ಮಾಲಕ:ಇಂತಿಯಾಜ್)
-ಕ್ಸೇವಿಯನ್ಸ್(ಮಾಲಕ:ಅಬ್ದುಲ್ ಖಾದರ್)
-ಎಕ್ಸ್69(ಮಾಲಕ:ಆಲ್‌ಸ್ಟನ್ ಗೊನ್ಸಾಲ್ವಿಸ್)
-ಹಾಕ್ಸ್ 14(ಮಾಲಕ:ನಾಸಿರ್ ಎನ್.ಎಸ್/ಅಜ್ಮಲ್)
-ಟೀಮ್ ಡಿಬಿಝಡ್(ಮಾಲಕ:ಅಮನ್/ಮಕ್ಸಫ್)
-ಅಗ್ನಿ ಬ್ರದರ್(ಮಾಲಕ:ವಿಕ್ರಂ ಆಳ್ವ/ಕರಣ್)

LEAVE A REPLY

Please enter your comment!
Please enter your name here