ನೀಟ್, ಸಿಇಟಿ ಕೋಚಿಂಗ್ ಕೇಂದ್ರ – ‘ಇನ್‌ಸ್ಪೈಯರ್ ಕೋಚಿಂಗ್ ಸೆಂಟರ್’-ಮೇ 21 ರಿಂದ ಜೆಇಇ, ನೀಟ್ ತರಗತಿಗಳು, ಫೌಂಡೇಶನ್ ಕೋರ್ಸ್

0

ಪುತ್ತೂರು:  ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನೀಟ್ ಮತ್ತು ಸಿಇಟಿ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್ ತರಗತಿಗಳನ್ನು ಪುತ್ತೂರಿನ ಹೆಗ್ಡೆ ಆರ್ಕೇಡ್ ಬಿಲ್ಡಿಂಗ್ ನಲ್ಲಿರುವ Inspire coaching centre ನಲ್ಲಿ ಕಳೆದ ತಿಂಗಳಿನಿಂದ ನಡೆಸಲಾಗುತ್ತಿದ್ದು ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ. ಪುತ್ತೂರಿನ ಆಸುಪಾಸಿನ ಅನುಭವೀ ಉಪನ್ಯಾಸಕರಲ್ಲದೆ ಮೂಡಬಿದ್ರೆ, ಮಂಗಳೂರು, ಉಜಿರೆಯ ವಿಷಯತಜ್ಞರು ಪರಿಣಾಮಕಾರಿಯಾಗಿ ತರಗತಿಗಳನ್ನು ನಡೆಸುತ್ತಿದ್ದಾರೆ. ಮೇ 10 ರವರೆಗೆ ತರಗತಿಗಳು ನಡೆಯಲಿದ್ದು ವಿದ್ಯಾರ್ಥಿಗಳಿಗೆ ಪೂರಕ ಮಾಹಿತಿ ಮತ್ತು ಅಧ್ಯಯನ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ಜೊತೆಗೆ ಪೂರ್ವ ತಯಾರಿ (ಮೊಕ್ ಟೆಸ್ಟ್) ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಆರ್ಥಿಕ ಸಮಸ್ಯೆ ಇರುವ ಕೆಲವು ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ವಿನಾಯಿತಿಯನ್ನು ಒದಗಿಸಲಾಗಿದೆ.

ಮೇ 21 ರಿಂದ ತರಗತಿಗಳು
ಮೇ 21 ರಿಂದ ಪ್ರತಿ ಭಾನುವಾರ ಪ್ರಸ್ತುತ ದ್ವಿತೀಯ ಪಿಯುಸಿಯಲ್ಲಿರುವ ವಿಜ್ಞಾನ ವಿದ್ಯಾರ್ಥಿಗಳಿಗೆ ಸಿಇಟಿ, ನೀಟ್, ಜೆಇಇ ತರಗತಿಗಳನ್ನು ನಡೆಸಲಾಗುವುದು. ಪ್ರಥಮ ಮತ್ತು ದ್ವಿತೀಯ ಪಿಯುಸಿಯ ಸಿಇಟಿ, ನೀಟ್, ಜೆಇಇ ಪಠ್ಯವನ್ನು (ಸಿಲಬಸ್) ನುರಿತ ಉಪನ್ಯಾಸಕರಿಂದ ಬೋಧಿಸಲಾಗುತ್ತದೆ. ಇದಕ್ಕೆ ಬೇಕಾದ synopsis, home test ಹಾಗೂ class test ಗಳನ್ನು ಒಳಗೊಂಡ ವಿಷಯ ತಜ್ಞರಿಂದ ರೂಪಿಸಲಾದ ಪಠ್ಯವನ್ನು ನೀಡಲಾಗುವುದು. ಈಗಾಗಲೇ ಈ ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಆರಂಭಗೊಂಡಿದ್ದು ಸೇರಲಿಚ್ಛಿಸುವ ವಿದ್ಯಾರ್ಥಿಗಳು ಶೀಘ್ರದಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು ಸೂಚಿಸಲಾಗಿದೆ.

ಫೌಂಡೇಶನ್ ಕೋರ್ಸ್ 
8, 9, ಮತ್ತು 10 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮುಂದೆ ಜೆಇಇ, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸಮರ್ಪಕವಾಗಿ ಎದುರಿಸಲು ಬೇಕಾದ ಕೌಶಲ್ಯಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ  ಮೇ 21 ರಿಂದ ಪ್ರತಿ ಭಾನುವಾರ ಇನ್ಸ್ಪಾಯರ್ ಕೋಚಿಂಗ್ ಸೆಂಟರ್ ನಲ್ಲಿ ಫೌಂಡೇಶನ್ ಕೋರ್ಸ್ ಆರಂಭಗೊಳ್ಳಲಿದೆ. 

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ
ಪರೀಕ್ಷೆಗಳನ್ನು ಎದುರಿಸುವುದೇ ವಿದ್ಯಾರ್ಥಿಗಳಿಗೆ ದೊಡ್ಡ ಸವಾಲಾಗಿದೆ. ಲಕ್ಷಾಂತರ ವಿದ್ಯಾರ್ಥಿಗಳು ಪ್ರತಿವರ್ಷ ಈ ಪರೀಕ್ಷೆಗಳನ್ನು ಎದುರಿಸುತ್ತಿರುವ ಕಾರಣ ಸ್ಪರ್ಧೆ ಅನಿವಾರ್ಯ. ಬಹುತೇಕ ವಿದ್ಯಾರ್ಥಿಗಳು ಪ್ರೌಢಶಿಕ್ಷಣದ ನಂತರ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಬೇಕಾಗಿರುವುದರಿಂದ ಆ ಕುರಿತಾದ ಅರಿವನ್ನು ಮೂಡಿಸುವ ಅಗತ್ಯವಿದೆ. ಅದಕ್ಕೆ ಬೇಕಾದ ಸಂಪೂರ್ಣ ಮಾಹಿತಿ ಪ್ರೌಢಶಾಲಾ ಹಂತದಲ್ಲೇ ದೊರೆತಾಗ ಸಮರ್ಪಕವಾಗಿ ಪರೀಕ್ಷೆಗಳನ್ನು ಎದುರಿಸಲು ಸಾಧ್ಯವಾಗುತ್ತದೆ. ಈ‌ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮಾನಸಿಕ ಒತ್ತಡ ನಿವಾರಣೆಯ ಜೊತೆಗೆ ಕೌಶಲ್ಯಗಳ ಕುರಿತು ಕೋಚಿಂಗ್ ನೀಡುವ ಅಪೇಕ್ಷೆ ನಮ್ಮದು. ವಿಷಯ ಪರಿಣತಿಯನ್ನು ಹೊಂದಿರುವ ಉಪನ್ಯಾಸಕರು ತರಗತಿಗಳನ್ನು ನಡೆಸಲಿದ್ದಾರೆ. ಆಸಕ್ತ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ’ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

 ಹೆಚ್ಚಿನ ಮಾಹಿತಿಗೆ: Inspire Coaching Classes, Hegde Arcade, 2nd Floor, Main Road, Puttur Mobile.No. 7349307261

LEAVE A REPLY

Please enter your comment!
Please enter your name here