ಪುತ್ತೂರು: ಕರ್ನಾಟಕ ರಾಜ್ಯ ವಿಧಾನ ಸಭಾ ಚುನಾವಣೆಗೆ ಪುತ್ತೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ಪರ ಚುನಾವಣಾ ಪ್ರಚಾರ ಸಭೆ ವಿಟ್ಲ ಮಹಾಸಂಗಮ-ಬೃಹತ್ ವಾಹನ ಜಾಥಾ ವಿಟ್ಲದಲ್ಲಿ ನಡೆಯಿತು.
ಸೀಗೆ ಬಲ್ಲೆ ಸ್ವಾಮಿ ಕೊರಗಜ್ಜ ದೈವಸ್ಥಾನದಿಂದ ಆರಂಭಗೊಂಡು ವಿಟ್ಲ ಪಂಚಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಹಾದು, ಮೇಗಿನಪೇಟೆ ಮೂಲಕ ಬಾಕಿಮಾರು ಅರಮನೆ ಮೈದಾನದವರೆಗೆ ನಡೆದ ಜಾಥಾದಲ್ಲಿ ನೂರಾರು ಜನರು ಭಾಗವಹಿಸಿದ್ದಾರೆ. ಬಳಿಕ ಅರಮನೆ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಿತು.
ಸಭೆಯಲ್ಲಿ ಮಾತನಾಡಿದ ಶ್ರೀ ಕೃಷ್ಣ ಉಪಾಧ್ಯಾಯ ವಿಟ್ಲದಲ್ಲಿ ಸೇರಿರುವ ಜನರು ಅದರಂತೆ 600ರೂಪಾಯಿಗೆ ಬಂದವರಲ್ಲಿ ಬಿಜೆಪಿ 3ನೇ ಸ್ಥಾನದಲ್ಲಿದ್ದು, ಪುತ್ತಿಲ ಗೆಲ್ಲದಿದ್ದರೆ ಮತಾಂಧ ಚಿಂತನೆಯ ಪಕ್ಷದ ಗೆಲುವಾಗುತ್ತದೆ. ಅರುಣ್ ಕುಮಾರ್ ಪುತ್ತಿಲರ ಗೆಲುವು ನಿಶ್ಚಿತ, ಅದನ್ನು ಈ ತುಳುನಾಡಿನ ಮಣ್ಣಿನ ದೈವ ದೇವರುಗಳು ನಿಶ್ಚಯಿಸಿ ಆಗಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅಪಪ್ರಚಾರ ಮೂಲಕ ಕಾರ್ಯಕರ್ತರ ಮಾನಸಿಕತೆಯನ್ನು ಕುಗ್ಗಿಸುವ ಕೆಲಸ ನಡೆಯಿತು. ಮೇ 10 ರವರೆಗೆ ನಾನು ಬದುಕಿರುತ್ತೇನೋ ಇಲ್ಲವೋ ಎಂಬ ಸಂದೇಹ ಇದೆ ಎಂದು ಭಾವುಕರಾಗಿ ಹೇಳಿದರು.
ಕಾರ್ಯಕರ್ತರ ಪ್ರೀತಿ, ವಿಶ್ವಾಸ, ಹಾರೈಕೆ ಅಧಿಕಾರಕ್ಕಿಂತಲೂ ಶ್ರೇಷ್ಠ ಎಂದು ಹೇಳಿದ ಪುತ್ತಿಲ ಎಲ್ಲರೂ ಬ್ಲಾಕ್ ಚಿಹ್ನೆಗೆ ಮತ ನೀಡುವಂತೆ ಕರೆ ನೀಡಿದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ