ಮೇನಾಲ ಏಳ್ನಾಡು ಗುತ್ತು ಜಲಧರ ಶೆಟ್ಟಿ ನಿಧನ

0

ಈಶ್ವರಮಂಗಲ: ಮೇನಾಲ ಏಳ್ನಾಡುಗುತ್ತು ಜಲಧರ ಶೆಟ್ಟಿ(86 ವರ್ಷ) ಅಲ್ಪಕಾಲದ ಅಸೌಖ್ಯದಿಂದಾಗಿ ಇಂದು ಮುಂಜಾನೆ ನಿಧನರಾದರು.

ಇವರು ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರು, ಜಿಲ್ಲಾ ಕಾಂಗ್ರೆಸ್ ಕಿಸಾನ್ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು. ನೆಟ್ಟಣಿಗೆ ಮುಡ್ನೂರು ಮಾಜಿ ಮಂಡಲ ಸದಸ್ಯರು, ಈಶ್ವರಮಂಗಲ ಯುವಕ ಮಂಡಲದ ಸ್ಥಾಪಕಾಧ್ಯಕ್ಷರು, ಬಂಟರ ಮಾತೃ ಸಂಘದ ನಿರ್ದೇಶಕರು ಆಗಿದ್ದರು. ಪತ್ನಿ ಸರೋಜಿನಿ, ಮಗ ಕಿಶನ್ ಶೆಟ್ಟಿ, ಸೊಸೆ ವಂದನಾ ಕಿಶನ್ ಶೆಟ್ಟಿ, ಪುತ್ರಿಯರಾದ ಭಾರತಿ ಸುಭಾಶ್ಚಂದ್ರ ರೈ, ಆರತಿ ವಿನಯ್ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here