ಹಾಡುಗಾರಿಕೆಯಲ್ಲಿ ಅವನಿ ನಾಯಕ್ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆ

0

ಪುತ್ತೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ 2022ರ ದಶಂಬರ್ ತಿಂಗಳಿನಲ್ಲಿ ನಡೆಸಿದ ಕರ್ನಾಟಕ ಸಂಗೀತ ಜೂನಿಯರ್ ಗ್ರೇಡ್ ಪರೀಕ್ಷೆಯ ಹಾಡುಗಾರಿಕಾ ವಿಭಾಗದಲ್ಲಿ ಅವನಿ ನಾಯಕ್ ಶೇ.93 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಪುತ್ತೂರಿನ ಉದ್ಯಮಿ ವಿನಾಯಕ ನಾಯಕ್ ಕೆ. ಮತ್ತು ಕೋಡಿಂಬಾಡಿಯ ಶಾಂತಿನಗರ ಸರಕಾರಿ ಪ್ರೌಢಶಾಲೆಯ ಶಿಕ್ಷಕಿ ಧನಲಕ್ಷ್ಮಿಯವರ ಪುತ್ರಿಯಾಗಿರುವ ಅವನಿ ನಾಯಕ್ ಅವರು ವಿದುಷಿ ಡಾ|| ಸುಚಿತ್ರಾ ಹೊಳ್ಳರವರ ಶಿಷ್ಯೆಯಾಗಿದ್ದು ಶ್ರೀ ರಾಮಕೃಷ್ಣ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ.

LEAVE A REPLY

Please enter your comment!
Please enter your name here