ನೆಲ್ಯಾಡಿ: ಬೆಥನಿ ಐಟಿಐನ ಹೊಸ ವೆಬ್‌ಸೈಟ್ ಉದ್ಘಾಟಣೆ

0

ನೆಲ್ಯಾಡಿ: ಬೆತನಿ ಐಟಿಐನ ಕಂಪ್ಯೂಟರ್ ವಿಭಾಗದ ವಿದ್ಯಾರ್ಥಿಗಳು ಸ್ವತ: ಅಭಿವೃದಿಪಡಿಸಿದ ಹೊಸ ವೆಬ್ ಸೈಟ್ www.bethanyiOnellyady.in ನ್ನು ಮೇ ೩ರಂದು ಬೆಥನಿ ಐಟಿಐನಲ್ಲಿ ಉದ್ಘಾಟಿಸಲಾಯಿತು.


ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿ ಇದರ ಪ್ರಾಂಶುಪಾಲರಾದ ಡಾ. ಸುರೇಶ್‌ರವರು ಉದ್ಘಾಟಿಸಿ ಮಾತನಡಿ, ವಿದ್ಯಾರ್ಥಿಗಳ ಕೌಶಲ್ಯ ಹಾಗೂ ಪರಿಶ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದರು. ಇದೇ ರೀತಿಯಲ್ಲಿ ಆಸಕ್ತಿಯಿಂದ ಮುಂದುವರಿದಲ್ಲಿ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನಿಶ್ಚಿತವಾಗಿ ಯಶಸ್ಸನ್ನು ಗಳಿಸಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರೆ.ಫಾ. ಜೈಸನ್ ಸೈಮನ್ ಓಐಸಿ ಅವರು ಮಾತನಾಡಿ, ವಿದ್ಯಾರ್ಥಿಗಳ ಕಠಿಣ ಪರಿಶ್ರಮವನ್ನು ಶ್ಲಾಘಿಸಿದರು. ಬೆಥನಿ ನವಜ್ಯೋತಿ ಪ್ರೊವಿನ್ಸ್‌ನ ಅಸಿಸ್ಟಂಟ್ ಪ್ರೊವಿನ್ಸಿಯಲ್ ಆದ ರೆ. ಡಾ. ವರ್ಗೀಸ್ ಕೈಪನಡುಕ್ಕ ಓಐಸಿ ಅವರು ಹಳ್ಳಿಯ ಮಕ್ಕಳ ಸಾಧನೆಯನ್ನು ಪ್ರಶಂಶಿಸಿದರು. ಅಧ್ಯಾಪಕರ ಮಾರ್ಗದರ್ಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಸಹಸಂಸ್ಥೆಯ ಪ್ರಾಂಶುಪಾಲರಾದ ರೆ. ಫಾ. ತೋಮಸ್ ಬಿಜಿಲಿ ಓಐಸಿ, ಸಂಸ್ಥೆಯ ಪ್ರಾಂಶುಪಾಲರಾದ ಸಜಿ ಕೆ. ತೋಮಸ್ ಅವರು ವಿದ್ಯಾರ್ಥಿಗಳ ಪ್ರತಿಭೆ ಬಗ್ಗೆ ಶ್ಲಾಘಿಸಿದರು. ಸುನಿಲ್ ಜೋಸೆಫ್ ಸ್ವಾಗತಿಸಿ, ಕಾರ‍್ಯಕ್ರಮ ನಿರೂಪಿಸಿದರು. ಸಂಸ್ಥೆಯ ತರಬೇತಿ ಅಧಿಕಾರಿ ಜಾನ್ ಪಿ.ಎಸ್. ವಂದಿಸಿದರು.


ಐಟಿಐನಲ್ಲಿ ಕಂಪ್ಯೂಟರ್ ಕಲಿಯುತ್ತಿರುವ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಇತರ ೩ ಸಾಫ್ಟ್‌ವೇರ್‌ಗಳಾದ Managing Trainees Database and CollecOng Fees, Library Management System for Schools, Managing and maintaining materials and billing Systemಗಳನ್ನು ಬೆಥನಿ ಐಟಿಐನ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪ್ರದರ್ಶಿಸಿದರು. ಐಟಿಐನ ಕಂಪ್ಯೂಟರ್ ವಿಭಾಗದ ಕಿರಿಯ ತರಬೇತಿ ಅಧಿಕಾರಿ ಸುನಿಲ್ ಜೋಸೆಫ್‌ರವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಈ ವೆಬ್‌ಸೈಟ್ ಹಾಗೂ ಸಾಫ್ಟ್‌ವೇರ್ ನ್ನು ಅಭಿವೃದ್ಧಿ ಪಡಿಸಿದ್ದರು.

LEAVE A REPLY

Please enter your comment!
Please enter your name here