ಕೊಯಿಲ: ಅಕ್ರಮ ಮರಳು ಅಡ್ಡೆಗೆ ಕಡಬ ಪೊಲೀಸರ ದಾಳಿ-ಡ್ರಿಜ್ಜಿಂಗ್ ಸಹಿತ ಸೊತ್ತುಗಳ ವಶ

0

ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿದ ಕಡಬ ಪೊಲೀಸರು ಮರಳು ತೆಗೆಯಲು ಬಳಸುತ್ತಿದ್ದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಮೇ 5ರಂದು ನಡೆದಿದೆ.


ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಕುಮಾರಧಾರ ಹೊಳೆಯಿಂದ ಅಕ್ರಮವಾಗಿ ಡ್ರಿಜ್ಜಿಂಗ್ ಬಳಸಿ ಮರಳು ತೆಗೆಯುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ ಕಡಬ ಠಾಣಾ ಪಿಎಸ್‌ಐ ಅವರು ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದರು. ಸ್ಥಳದಲ್ಲಿ ಪರಿಶೀಲನೆ ನಡೆಸಿದ ವೇಳೆ ಡ್ರಿಜ್ಜಿಂಗ್ ಬಳಸಿ ಮರಳು ತೆಗೆಯುತ್ತಿರುವುದು ಕಂಡುಬಂದಿದ್ದು ಸ್ಥಳದಲ್ಲಿದ್ದ 4HP ಮೋಟರು ಅಳವಡಿಸಿರುವ ಡ್ರಿಜ್ಜಿ೦ಗ್ ಸಹಿತ ಬೋಟ್-01, ಡ್ರಿಜ್ಜಿ೦ಗ್ ಮೋಟಾರ್‌ಗೆ ಅಳವಡಿಸಿರುವ 6 ಇಂಚು ಸುತ್ತಳತೆಯ 20 ಅಡಿ ಉದ್ದದ ಫೈಬರ್ ಪೈಪು-01, 6 ಇಂಚು ಸುತ್ತಳತೆಯ 20 ಅಡಿ ಉದ್ದದ ಕಬ್ಬಿಣದ ಪೈಪುಗಳು-06, ಕಬ್ಬಿಣದ ಪೈಪುಗಳಿಗೆ ಅಳವಡಿಸಿದ ಕಬ್ಬಿಣದ ಡ್ರಮ್‌ಗಳು-14, 4*6 ಅಡಿ ಉದ್ದದ ಕಬ್ಬಿಣದ ಜಾಲರಿ-01, ಮರಳು ತೆಗೆಯಲು ಉಪಯೋಗಿಸುವ ಕಬ್ಬಿಣದ ಕೈ ಗುದ್ದಲಿಗಳು-02, ಪ್ಲಾಸ್ಟಿಕ್ ಬುಟ್ಟಿ-01 ವಶಪಡಿಸಿಕೊಂಡಿದ್ದಾರೆ. ಸೊತ್ತುಗಳನ್ನು ಮಹಜರು ಮಾಡಿ ಸ್ವಾಧೀನ ಪಡಿಸಿಕೊಂಡು ಠಾಣೆಗೆ ತಂದಿದ್ದು ಮುಂದಿನ ಕಾನೂನು ಕ್ರಮ ಕೈಗೊಳುವಂತೆ ಕೋರಿ ಗಣಿ ಇಲಾಖೆಗೆ ವರದಿ ಸಲ್ಲಿಸಲಾಗುವುದು ಎಂದು ಕಡಬ ಪಿಎಸ್‌ಐ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here