ಕರ್ನಾಟಕ ವಿಕಾಸಕ್ಕಾಗಿ, ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಬಿಜೆಪಿ ಬೆಂಬಲಿಸಿ- ಯೋಗಿ ಆದಿತ್ಯನಾಥ್

0

ಪುತ್ತೂರು :ಕರ್ನಾಟಕದ ವಿಕಾಸಕ್ಕಾಗಿ ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಟೀಮ್‌ ಇಂಡಿಯಾ ಪರಿಕಲ್ಪನೆಯಲ್ಲಿ ಮೋದಿಯೊಂದಿಗೆ ಸದೃಡವಾಗಿ ನಿಲ್ಲಲು ಕರ್ನಾಟಕದಲ್ಲಿ ಬಿಜೆಪಿಯ ಡಬಲ್‌ ಇಂಜಿನ್‌ ಸರಕಾರ ಅವಶ್ಯಕವಾಗಿದೆ ಈ ಹಿನ್ನೆಲೆಯಲ್ಲಿ ಪುತ್ತೂರಿನಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಆಶಾ ತಿಮ್ಮಪ್ಪ ಗೌಡ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಉತ್ತರ‌ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಕರೆ ನೀಡಿದ್ದಾರೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯಿಂದ ಕಿಲ್ಲೆ ಮೈದಾನದವರೆಗೆ ರೋಡ್‌ ಶೋ ನಡೆಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಯೋಗಿ ಉತ್ತರ ಪ್ರದೇಶ ಮತ್ತು ಕರ್ನಾಟಕದ ಸಂಬಂಧ ಪ್ರಾಚೀನವಾದದ್ದು ಅಷ್ಟೇ ಪ್ರಾಚೀನ ಮಾನವ ಸಭ್ಯತೆಯ ಇತಿಹಾಸ ಸಾವಿರಾರು ವರ್ಷಗಳ ಹಿಂದೆ ಶ್ರೀರಾಮನ ವನವಾಸ ಕಾಲದಲ್ಲಿ ಸಹಯೋಗಿಯಾಗಿ ಹನುಮಾನ್‌ ಸಿಕ್ಕಿದ್ದರು. ಮಾತ್ರವಲ್ಲ ಅಂತಿಮ ಕಾಲದವರೆಗು ರಾಮನಿಗೆ ಸಹಯೋಗ ನೀಡಿದ್ದರು. ಅಯೋಧ್ಯೆಯಲ್ಲಿ ರಾಮಮಂದಿರ ಕಾರ್ಯ ನಡೆಯುತ್ತಿದ್ದು ಕರ್ನಾಟಕದ ಡಬಲ್‌ ಇಂಜಿನ್‌ ಸರಕಾರ ಅಯೋಧ್ಯೆಯಲ್ಲಿ ಭಕ್ತ ಮಂದಿರ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಿದೆ. ಶ್ರೀರಾಮನ ವಿಚಾರದಲ್ಲಿ ಬಿಜೆಪಿ ಸಮ್ಮಾನ ಮಾಡುತ್ತಿದ್ದರೆ ಕಾಂಗ್ರೆಸ್‌ ಅವಮಾನ ಮಾಡುತ್ತಿದೆ. ಕಾಂಗ್ರೆಸ್‌ ಶ್ರೀರಾಮನ ಅಸ್ಥಿತ್ವದ ಬಗ್ಗೆ ಪ್ರಶ್ನೆ ಎತ್ತಿ ಇದೊಂದು ಕಾಲ್ಪನಿಕ ಕಥೆಯೆಂದು ಹೇಳಿತ್ತು ಮಾತ್ರವಲ್ಲ ಸುಪ್ರೀಕೊರ್ಟ್‌ಗೆ ಇದನ್ನೆ ಹೇಳಿತ್ತು. ಬಜರಂಗಬಲಿಯ ನಾಡು ಕರ್ನಾಟಕದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಪಿಎಫ್‌ಐ ಗೆ ಮುಕ್ತಿ ಕೊಡುತ್ತೇವೆ ಬಜರಂಗದಳವನ್ನು ಬ್ಯಾನ್‌ ಮಾಡುತ್ತೇವೆ ಎಂದು ಹೇಳಿದೆ. ರಾಷ್ಟ್ರೀಯವಾದಿಗಳ ಮನೋಬಲವನ್ನು ಕುಗ್ಗಿಸಿ ಕಾಂಗ್ರೆಸ್‌ ರಾಷ್ಟ್ರದ್ರೋಹಿಗಳಿಗೆ ಪ್ರೋತ್ಸಾಹ ನೀಡುವ ಕೆಲಸ ಮಾಡುತ್ತಿದೆ. ಇದನ್ನು ಯಾವುದೇ ರಾಷ್ಟ್ರೀಯವಾದಿ ನಾಯಕರು ಒಪ್ಪಲು ಸಿದ್ದರಿಲ್ಲ ಎಂದು ಯೋಗಿ ಗುಡುಗಿದರು.

ಬಜರಂಗದಲ ಸಾಮಾಜಿಕ, ಸಾಂಸ್ಕೃತಿಕ ಭಾರತಮಾತೆಗೆ ಸಮರ್ಪಿತ ಯುವಕರ ಸಂಘಟನೆಯಾಗಿದೆ. ಭಾರತದ ಸನಾತನ ಧರ್ಮವನ್ನು ಗೌರವಿಸುವ ಭಾರತದ ಸಾಮಾಜಿಕ ಕಾರ್ಯಗಳಿಗೆ ಯೋಗದಾನ ನೀಡುವ ಸಂಘಟನೆಯಾಗಿದೆ.ಭಾರತ ಪ್ರಧಾನ ಮಂತ್ರಿ ಮೋದಿ ನೇತೃತ್ವದಲ್ಲಿ ಸುರಕ್ಷಿತವಾಗುತ್ತಿದೆ. ವಿಶ್ವದ ದೊಡ್ಡ ಶಕ್ತಿಯಾಗಿ ಮೇಲೆ ಬರುತ್ತಿದೆ. ಅಭಿವೃದ್ದಿಯ ನಿಟ್ಟಿನಲ್ಲಿ ಕಾರ್ಯಗಳು ನಡೆಯುತ್ತಿದ್ದು ಮೋದಿ ನೇತೃತ್ವದಲ್ಲಿ ಯಾವುದೇ ಬೇಧಬಾವವಿಲ್ಲದೆ ಪ್ರತೀ ಬಡವ , ರೈತ, ಮಹಿಳೆ, ಸಭ್‌ ಕಾ ಸಥ್‌ ಸಭ್‌ ಕಾ ವಿಕಾಸ್‌ ಯೋಜನೆಯಡಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಪ್ರಧಾನಮಂತ್ರಿಗಳ ದೂರದೃಷ್ಟಿ ಯೋಜನೆಗಳು ಯಡಿಯರಪ್ಪ, ಬಸವರಾಜ್‌ ಬೊಮ್ಮಾಯಿ ನೇತೃತ್ವದ ಡಬಲ್‌ ಇಂಜಿನ್‌ ಸರಕಾರ ಕರ್ನಾಟಕವನ್ನು ಭಾರತದ ವಿಕಾಸದ ಭಾಗವಾಗಿ ಮಾಡುತ್ತಿದೆ ಆದರೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಇಲ್ಲಿನ ಅಭಿವೃದ್ದಿ ಕಾರ್ಯಗಳಿಗೆ ತಡೆಯಾಗಿದೆ. ಕರುನಾಡ ಜನತೆ ಈ ಪಕ್ಷಗಳನ್ನು ಸ್ವೀಕರಿಸಬಾರದು. ಇದನ್ನು ಹೇಳುವುದಕ್ಕಾಗಿಯೇ ನಾನು ನಿಮ್ಮ ಬಳಿ ಬಂದಿದ್ದೇನೆ. ಸಾಮಾನ್ಯ ಕಾರ್ಯಕರ್ತೆಯಾಗಿರುವ ಆಶಾ ತಿಮ್ಮಪ್ಪ ಗೌಡ ವಿರೋಧದ ನಡುವೆ ಚುನಾವಣೆ ಎದುರಿಸುತ್ತಿದ್ದು ನಾವು ಯಾವುದೇ ಒತ್ತಡಗಳಿಗೆ, ಆಸೆ, ಆಕಾಂಸೆಗಳಿಗೆ ಬಲಿ ಬೀಳದೆ ಭಾಜಪದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರನ್ನು ಬಹುಮತದಿಂದ ಗೆಲ್ಲಿಸುವಂತೆ ಕೇಳಿಕೊಳ್ಳುತ್ತೇನೆ ಎಂದು ಯೋಗಿ ಹೇಳಿದರು.

ಪ್ರಚಾರ ವಾಹನದಲ್ಲಿ ಯೋಗಿಯೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌, ಶಾಸಕ ಸಂಜೀವ ಮಠಂದೂರು, ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ, ಸಾಜಾ ರಾಧಕೃಷ್ಣ ಆಳ್ವ, ದ.ಕ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌ ಮೂಡಬಿದ್ರೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here