ಲಂಚ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಎಎಪಿಯ ಸುಮನಾ ಬೆಳ್ಳಾರ್ಕರ್‌ರನ್ನು ಬೆಂಬಲಿಸಲು ಮಾಜಿ ಶಾಸಕ ಕೆ.ಕುಶಲ ಮನವಿ

0

ಪುತ್ತೂರು : ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ,ಬಡಜನರ ನೋವು ನಲಿವುಗಳಿಗೆ ಸದಾ ಸ್ಪಂದಿಸಲು ಬದ್ಧವಾಗಿರುವ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾದ ಸುಮನಾ ಬೆಳ್ಳಾರ್ಕರ್ ರನ್ನು ಬೆಂಬಲಿಸಬೇಕೆಂದು ಸುಳ್ಯದ ಮಾಜಿ ಶಾಸಕ ಕೆ.ಕುಶಲ ವಿನಂತಿಸಿದ್ದಾರೆ.


ಆಮ್ ಆದ್ಮಿ ಪಕ್ಷವು ದೇಶದ , ಜನಸಾಮಾನ್ಯ ಬಡಜನತೆಯ ನೋವು ನಲಿವುಗಳಿಗೆ ಸ್ಪಂದಿಸುತ್ತಿರುವ ಪಕ್ಷವಾಗಿ ಹೊರಹೊಮ್ಮಿದೆ.
ಲಂಚ ಭ್ರಷ್ಟಾಚಾರದ ವಿರುದ್ಧ ಮಾತ್ರವಲ್ಲದೆ ಜನತೆಯ ತೆರಿಗೆಯ ಹಣವನ್ನು ಜನರಿಗೆ ನೆರವಾಗುವಂತೆ ಸದುಪಯೋಗ ಪಡಿಸುವ ಕಾರ್ಯವನ್ನು ಎಎಪಿ ಮಾಡುತ್ತಿದೆ ಎಂದಿರುವ ಕೆ.ಕುಶಲರು, ಬಿಜೆಪಿ ಪಕ್ಷದಿಂದಲೇ ಅಭಿವೃದ್ಧಿ ಬಡವರ ಏಳಿಗೆ ಎನ್ನುವವರು ದೇಶದಲ್ಲಿ ಬೆಲೆ ಏರಿಕೆಯಿಂದ ದಿನನಿತ್ಯದ ಯಾವುದೇ ಆಹಾರ ಧಾನ್ಯಗಳನ್ನು ತಿಂದು ಜೀವಿಸಲು ಸಾಧ್ಯವಾಗುತ್ತಿಲ್ಲ. ಈ ಬೆಲೆ ಏರಿಕೆಯಿಂದ ದೇಶ ದೇಶದ ಜನತೆ ತತ್ತರಿಸಿ ಹೋದರೂ, ಇದರ ಬಗ್ಗೆ ಒಂದು ಮಾತನ್ನು ಪಕ್ಷದ ವತಿಯಿಂದ ತುಟಿ ಪಿಟಿಕ್ ಎನ್ನುತ್ತಿಲ್ಲ. ದೇಶದಲ್ಲಿ, ರಾಜ್ಯದಲ್ಲಿ ಗ್ರಾಮೀಣ ಪ್ರದೇಶದಲ್ಲಿ, ಜನಸಾಮಾನ್ಯರ, ಬಡಮಕ್ಕಳಿಗೆ ಶಿಕ್ಷಣದ ಹಾಗೂ ವೈದ್ಯಕೀಯ ಸವಲತ್ತು ನೀಡಲಾಗುತ್ತಿಲ್ಲ. ಬಿಜೆಪಿ ಸರಕಾರ 40% ಕಮಿಷನ್ ಪಡೆಯುವ ಸರಕಾರವೆಂದು ಜನ ಜನಿತವಾಗಿದೆ ಎಂದಿದ್ದಾರೆ.


ದೇಶದ ಲಂಚ, ಭ್ರಷ್ಟಾಚಾರ, ಕಮಿಷನ್ ಪಿಡುಗು, ದೌರ್ಜನ್ಯ ನಿವಾರಣೆ ಆಮ್ ಆದ್ಮಿ ಪಕ್ಷದಿಂದ ಸಾಧ್ಯ. ನಿರುದ್ಯೋಗ ಸಮಸ್ಯೆ, ಶಿಕ್ಷಣಕ್ಕೆ ನೀಡಬೇಕಾದ ವಿದ್ಯಾರ್ಥಿ ವೇತನ, ವೈದ್ಯಕೀಯ ಸವಲತ್ತು, ಸಬ್ಸಿಡಿ ಸಹಾಯಧನದ ಸವಲತ್ತನ್ನು ನೀಡಿ ಬಡಜನತೆಯ ಅಭಿವೃದ್ಧಿ ಸಾಧ್ಯ. ಆಮ್ ಆದ್ಮಿ ಪಕ್ಷದ ತತ್ವ, ಸಿದ್ಧಾಂತವೇ ದೇಶದ ಬಡ ಜನರ ಏಳಿಗೆಯನ್ನು ಕಾಪಾಡಲು ಕಟಿಬದ್ಧವಾಗಿದೆ. ಆದ್ದರಿಂದ ಮೇ 10 ರಂದು ನಡೆಯುವ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದಿಂದ (ಸುಳ್ಯ ಕಡಬ ತಾಲೂಕಿನ) ಸುಳ್ಯ ವಿಧಾನಸಭಾ ಕ್ಷೇತ್ರದಿಂದ ಆಮ್ ಆದ್ಮಿಪಕ್ಷದ ಪೊರಕೆ ಚಿಹ್ನೆಯಿಂದ ಸ್ಪರ್ಧಿಸುತ್ತಿರುವ ಸುಮನಾ ಬೆಳ್ಳಾರ್ಕರ್‌ರಿಗೆ ಮತನೀಡಬೇಕಾಗಿ ಕೆ.ಕುಶಲ ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here