ನೆಲ್ಲಿಕಟ್ಟೆ ಮತದಾನ ಕೇಂದ್ರದಲ್ಲಿ ವೀಲ್ಹ್ ಚಯರ್ ನಲ್ಲಿ ಬಂದು ಮತ ಚಲಾಯಿಸಿದ 88 ವರ್ಷದ ವೃದ್ಧೆ

0

ಪುತ್ತೂರು: ನೆಲ್ಲಿಕಟ್ಟೆ ಮತದಾನ ಕೇಂದ್ರದಲ್ಲಿ 88 ವರ್ಷದ ವೃದ್ಧೆಯೊಬ್ಬರು ವೀಲ್ಹ್ ಚಯರ್ ನಲ್ಲಿ ಬಂದು ಮತ ಚಲಾಯಿಸಿದರು. 88 ವರ್ಷ ಪ್ರಾಯದ ಪುಷ್ಪಾವತಿ ಅವರು ಮತಚಲಾಯಿಸಲು ತನ್ನ ಇಬ್ವರು ಪುತ್ರರಾದ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್ ಮತ್ತು ಪಿ ಜಿ ಚಂದ್ರಶೇಖರ್ ರಾವ್ ಅವರೊಂದಿಗೆ ಆಗಮಿಸಿ, ಮತಗಟ್ಟೆಯ ಕೇಂದ್ರದಿಂದ ವೀಲ್ಹ್ ಚಯರ್ ಮೂಲಕ ತೆರಳಿ ಮತಚಲಾಯಿಸಿದರು.

ಈ ಸಂದರ್ಭ ಚುನಾವಣಾಧಿಕಾರಿ ಗಿರೀಶ್ ನಂದನ್ ಪುಷ್ಪಾವತಿ ಅವರನ್ನು ಮಾತನಾಡಿಸಿದರು. ಪುಷ್ಪಾವತಿ ಅವರ ಮೊಮ್ಮಕ್ಕಳಾದ ವೈಷ್ಣವಿ ಜೆ ರಾವ್, ಶ್ರೀಕೃಷ್ಣ ಜೆ ರಾವ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here