ಸರ್ವೆ ಕಲ್ಪಣೆ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ಕೈಕೊಟ್ಟ ವಿದ್ಯುತ್- ವ್ಯವಸ್ಥೆಯ ವಿರುದ್ಧ ಆಕ್ರೋಶ

0

ಕತ್ತಲೆ ಆವರಿಸಿ ಮತದಾನ ಮಾಡಲು ಪರದಾಟ ನಡೆಸುತ್ತಿರುವ ಮತದಾರರು

ಪುತ್ತೂರು: ಸರ್ವೆ ಕಲ್ಪಣೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ (193) ಮತಗಟ್ಟೆಯಲ್ಲಿ ಸಂಜೆ ವೇಳೆ ವಿದ್ಯುತ್ ಕೈ ಕೊಟ್ಟಿದ್ದು, ಮತದಾನ ಮಾಡುವ ಇವಿಎಂ ಮೆಷಿನ್ ಸ್ಥಳದಲ್ಲಿ ಕತ್ತಲೆ ಆವರಿಸಿ ಜನರು ಮತ ಚಲಾಯಿಸಲು ಪರದಾಡುತ್ತಿದ್ದಾರೆ.

ಇದೀಗ ಎಮರ್ಜನ್ಸಿ ಲೈಟ್ ಇಟ್ಟು ಮತದಾನ ಪ್ರಕ್ರಿಯೆ ಮುಂದುವರಿದಿದೆ. ಸಂಜೆ ವೇಳೆ ಮತದಾನ ಮಾಡಲು ಸಾಕಷ್ಟು ಜನರು ಮತಗಟ್ಟೆಯ ಹೊರಗಡೆ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ. ಅವ್ಯವಸ್ಥೆ ಬಗ್ಗೆ ಸ್ಥಳದಲ್ಲಿದ್ದ ಪ್ರಮುಖರಾದ ಕರುಣಾಕರ ಗೌಡ ಎಲಿಯ, ರಾಮಚಂದ್ರ ಸೊರಕೆ ಸೇರಿದಂತೆ ಸರತಿ ಸಾಲಿನಲ್ಲಿದ್ದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here