ಕುದ್ಮಾರು: ಶಾಂತಿಮೊಗರು ಕ್ರಾಸ್ ರಸ್ತೆಯಲ್ಲಿ ಹಂಪ್ ನಿರ್ಮಿಸಿ

0

ಪುತ್ತೂರು: ಕಡಬ ಮತ್ತು ಪುತ್ತೂರು ತಾಲೂಕಿನ ಜನರಿಗೆ ಅತ್ಯಂತ ಪ್ರಯೋಜನಕಾರಿಯಾದ ಶಾಂತಿಮೊಗರು ಸೇತುವೆ ನಿರ್ಮಾಣದ ಬಳಿಕ ಕಡಬದಿಂದ ಪುತ್ತೂರಿಗೆ, ಪುತ್ತೂರು, ಸುಳ್ಯ ಭಾಗದಿಂದ ಕಡಬಕ್ಕೆ ತೆರಳುವ ಸಾವಿರಾರು ಪ್ರಯಾಣಿಕರಿಗೆ ಬಹಳ ಹತ್ತಿರದ ದಾರಿಯಾಗಿರುವ ಕುದ್ಮಾರು ಶಾಂತಿಮೊಗರು ರಸ್ತೆಯ ಶಾಂತಿಮೊಗರು ಕ್ರಾಸ್‌ನಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಎರಡು ಅಪಘಾತಗಳು ನಡೆದಿದೆ. ಇದರಿಂದ ಈರ್ವರು ಬೈಕ್ ಸವಾರರು ಗಾಯಗೊಂಡಿದ್ದಾರೆ. ಇಲ್ಲಿ ವಾಹನಗಳು ಅತೀ ವೇಗದಲ್ಲಿ ಸಂಚಾರ ಮಾಡುವುದರಿಂದ ಈ ರೀತಿಯ ಅಪಘಾತಗಳು ಪದೇ ಪದೇ ಸಂಭವಿಸುತ್ತಿದ್ದು, ಇದರ ನಿಯಂತ್ರಣಕ್ಕಾಗಿ ಶಾಂತಿಮೊಗರು ಕ್ರಾಸ್‌ನಲ್ಲಿ ಹಂಪ್ ನಿರ್ಮಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕಾಗಿ ನಾಗರಿಕರು ವಿನಂತಿಸಿದ್ದಾರೆ.

LEAVE A REPLY

Please enter your comment!
Please enter your name here