ಪುತ್ತೂರು: 2022-23ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆಯ ಫಲಿತಾಂಶವು ಪ್ರಕಟಗೊಂಡಿದ್ದು, ನೆಹರುನಗರದ ಸುದಾನ ಪ್ರೌಢಶಾಲೆಗೆ ಶೇ.97.83 ಫಲಿತಾಂಶ ಲಭಿಸಿದೆ. ಶಾಲೆಯ ವಿದ್ಯಾರ್ಥಿ ಲಿಶೋನ್ ಮಿರಾಂದರವರು 612 ಅಂಕಗಳನ್ನು ಪಡೆದು ಶಾಲೆಯಲ್ಲಿ ಅಗ್ರಸ್ಥಾನಿಯಾಗಿದ್ದು, ದ್ವಿತೀಯ ಸ್ಥಾನದಲ್ಲಿ ಸತ್ಯಪ್ರಸಾದ್ ನಾಯಕ್‌ರವರು 610 ಅಂಕ, ಮೂರನೇ ಸ್ಥಾನದಲ್ಲಿ ಅನಿಕೇತ್ ಎನ್‌ರವರು 607 ಅಂಕಗಳನ್ನು ಗಳಿಸುವ ಮೂಲಕ ನಂತರದ ಸ್ಥಾನದಲ್ಲಿದ್ದಾರೆ.
ವಿಶಿಷ್ಟ ಶ್ರೇಣಿ ಪಡೆದವರಲ್ಲಿ ಜೋಶಿತಾರವರು 606 ಅಂಕ, ಸೃಷ್ಟಿ 606 ಅಂಕ, ರುಕ್ಯಾ ಶೈಝಾ 604 ಅಂಕ, ಅಕ್ಷಯ್ ಡಿ.ಎಲ್ 602 ಅಂಕ, ವೃಂದ ಜೆ.ಗೌಡ 601 ಅಂಕ, ಅಕ್ಷಯ್ ರೈ 597 ಅಂಕ, ಸಾನ್ವಿ ರೈ 597 ಅಂಕ, ವಿಖ್ಯಾತಿ ಬೆಜ್ಜಂಗಳ 595 ಅಂಕ, ಅಚಲ್ ಕೆ 592 ಅಂಕ, ವಿಶ್ವಾಸ್ ವಿ.ಎಸ್ 591 ಅಂಕ, ಮನೋಜ್ ಜಿ.ಎ 588 ಅಂಕ, ವಿನಯ್ ಬಿ.ಜೆ 587 ಅಂಕ, ಯತೀಶ್ ಗೌಡ ಎಂ.ಕೆ 587 ಅಂಕ, ಆಯೇಶ ತನಾಝ್ 584 ಅಂಕ, ಸಾನ್ವರಿ ಗೌಡ ಎ.ಎಸ್ 583 ಅಂಕ, ಆಫಿಯ ಫಾತಿಮ ನೈಶಾ 582 ಅಂಕ, ಸುಹಾಸ್ ಟಿ 577 ಅಂಕ, ಶರತ್‌ಚಂದ್ರ ರಾಕೇಶ್ 567 ಅಂಕ, ಲಾಸ್ಯ ಬಿ.ಶೆಟ್ಟಿ 564 ಅಂಕ, ವೃದ್ಧಿ ಪಿ.ಎನ್ 559 ಅಂಕ, ಶ್ರೀವರ್ಧನ್ ಎಸ್.ಕೆ 558 ಅಂಕ, ಮೊಹಮದ್ ಹಾಫಿಲ್ 557 ಅಂಕ, ನಂದನ್ ನಾಯ್ಕ್ 555 ಅಂಕ, ನೌಮನ್ ಹುಸೈನ್ ಎನ್ 555 ಅಂಕ, ಸನವಿ ರೈ ಎಸ್ 553 ಅಂಕ, ಹಲೀಮತ್ ಸುಹಾ 552 ಅಂಕ, ಶಾಝ ನಹ್ಲ ಪಿ.ಎಸ್ 552 ಅಂಕ, ಕೃಪಾಂಕ್ ಯಾದವ್ ಪಿ.ಎಸ್ 551 ಅಂಕ, ದೀಪ್ತನ್ ರೈ 548 ಅಂಕ, ಪ್ರೀತಂ ಚೌಹಾನ್ 548 ಅಂಕ, ಫಾತಿಮ ಮಿನಹಲ್ ಅಯೇಶಾ 547 ಅಂಕ, ಯಶಸ್ ಎಚ್.ರಜನಿ 547 ಅಂಕ, ಆಯಿಶತ್ ಸಿಝಾ 546 ಅಂಕ, ಬಿ.ಅಪೇಕ್ಷ ಪೈ 542 ಅಂಕ, ಸ್ವಾತಿ ಕೆ 542 ಅಂಕ, ಗೌರವ್ ಎ.ಎಸ್ 541 ಅಂಕ, ತಂಬ್ರೀನ್ ದಿಶಾನಾ 540 ಅಂಕ, ಸಲ್ಮಾನ್ -Áರಿಶ್ ಖಾಸಿಂ 538 ಅಂಕ, ಆಯುಷ್ ಆಮನ್ 534 ಅಂಕಗಳನ್ನು ಗಳಿಸಿಕೊಂಡಿದ್ದಾರೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.
58 ಮಂದಿ ಹುಡುಗರು ಹಾಗೂ 34 ಮಂದಿ ಹುಡುಗಿಯರು ಸೇರಿ ಒಟ್ಟು 92 ಮಂದಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದು 8 ಮಂದಿ ವಿದ್ಯಾರ್ಥಿಗಳು 600 ಅಂಕಗಳಿಗಿಂತ ಮೇಲ್ಪಟ್ಟು ಅಂಕಗಳನ್ನು ಗಳಿಸಿದ್ದಾರೆ. 42 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 42 ಮಂದಿ ಪ್ರಥಮ ಶ್ರೇಣಿಯಲ್ಲಿ ಹಾಗೂ 6 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.