ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯ ಜೀರ್ಣೋದ್ಧಾರ, ಪುನಃಪ್ರತಿಷ್ಠಾಪನೆ

0

ಪುತ್ತೂರು: ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿಯ ನೇಮನಡಾವಳಿಯಲ್ಲಿ ದರ್ಶನ ಪಾತ್ರಿಯ ಮೂಲಕ ದೇವಿಯು ‘ನಾನು ತೊಟ್ಟಿಲಕಯದಿಂದ ಆವಿರ್ಭವಿಸಿದ್ದೇನೆ’ ಎನ್ನುವ ಮಾತನ್ನು ಉಚ್ಚರಿಸುವುದು ಐತಿಹಾಸಿಕ ವಿಷಯಕ್ಕೆ ಹಿಡಿದ ಕೈಗನ್ನಡಿಯಂತೆ ಮೆ.12 ಬಲ್ನಾಡು ಶ್ರೀ ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ದಾರ, ಪುನಃಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದೆ.

ಜೀರ್ಣೋದ್ಧಾರ ಮತ್ತು ಮನಃಪ್ರತಿಷ್ಠಾಪನೆ :
ಶ್ರೀಮತ್ ಪರಮಹಂಸೇತ್ಯಾದಿ ಸಮಸ್ತ ಬಿರುದಾವಳಿ ವಿರಾಜಮಾನರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ಶ್ರೀ ಶ್ರೀ ಭಾರತೀ ತೀರ್ಥ ಮಹಾಸನ್ನಿಧಾನಂಗಳವರ ಹಾಗೂ ತತ್ವರಕಮಲ ಸಂಜಾತರಾದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಸನ್ನಿಧಾನಂಗಳವರ ಪರಮಾನುಗ್ರಹದಿಂದ ಸ್ವಸ್ತಿ ಶ್ರೀ ಶೋಭಕೃತ್ ನಾಮ ಸಂವತ್ಸರದ ವೈಶಾಖ ಕೃಷ್ಣ ಸಪ್ತಮಿಯು ಮೇ 12ರಂದು ಬೆಳಿಗ್ಗೆ ಗಂಟೆ 8.22ಕ್ಕೆ ಶ್ರೀ ಬಲ್ನಾಡು ಉಳ್ಳಾಲ್ತಿ ಮೂಲಸ್ಥಾನ ತೊಟ್ಟಿಲಕಯದ ಜೀರ್ಣೋದ್ದಾರ ಮತ್ತು ಪುನಃಪ್ರತಿಷ್ಠಾಪನೋತ್ಸವವು ವೇದಮೂರ್ತಿ ಜಗದೀಶ ಭಟ್ ಭಟಪಾಡಿ ಇವರ ನೇತೃತ್ವದಲ್ಲಿ ಜರುಗಿತು.ಅನೇಕ ಊರ ಪರವೂರ ಭಕ್ತರು ಪಾಲ್ಗೊಂಡರು.

LEAVE A REPLY

Please enter your comment!
Please enter your name here