ನೂತನ ಶಾಸಕರು ಭ್ರಷ್ಟಾಚಾರ ರಹಿತ ಆಡಳಿತ ನೀಡಲಿ-ಪುತ್ತಿಲ

0

ಇದು ನಮ್ಮ ಸೋಲಲ್ಲ. ಸಣ್ಣ ರೀತಿಯ ಸೈದ್ಧಾಂತಿಕ ಗೆಲುವು

ಪುತ್ತೂರು:ಈಗಾಗಲೇ ಪುತ್ತೂರು ವಿಧಾನಸಭಾ ಚುನಾವಣೆಯಲ್ಲಿ ನೂತನ ಶಾಸಕರಾಗಿ ಅಶೋಕ್ ಕುಮಾರ್ ರೈ ಅವರು ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.ಅವರು ಭ್ರಷ್ಟಾಚಾರ ರಹಿತ ಆಡಳಿತ ನಡೆಸಲಿ.ಕ್ಷೇತ್ರದ ಎಲ್ಲಾ ಜನರ ವಿಶ್ವಾಸ ಪಡೆದು ಆಡಳಿತ ಮಾಡಲಿ ಎಂದು ಪರಾಜಿತ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಅವರು ಹೇಳಿದ್ದಾರೆ.


ವಿಧಾನಸಭೆ ಚುನಾವಣೆಯ ಬಳಿಕ ಸೋಲಿನ ಕಾರಣದ ಕುರಿತು ಮಾತನಾಡಿದ ಅವರು, ದೊಡ್ಡದಾಗಿರುವ ಮತದಾರರು ನಮ್ಮ ಜೊತೆಗೆ ನಿಂತಿದ್ದಾರೆ.20 ದಿವಸಗಳಲ್ಲಿ ಸುಮಾರು 60 ಸಾವಿರಕ್ಕಿಂತ ಹೆಚ್ಚಿನ ಮತದಾರರು ನಮ್ಮ ಜೊತೆ ನಿಂತು ಈ ಕ್ಷೇತ್ರದ ವಿಚಾರಧಾರೆ ಸಿದ್ದಾಂತ ಒಪ್ಪಿಕೊಂಡು ಸಹಕಾರ ನೀಡಿದ್ದಾರೆ.ಅವರಿಗೆ ನಾವು ಯಾವತ್ತೂ ಕೂಡಾ ಚಿರಋಣಿ ಎಂದರು.ಹಿಂದುತ್ವವನ್ನು ಪ್ರತಿಪಾದನೆ ಮಾಡಬೇಕು ಮತ್ತು ಸ್ವಜನಪಕ್ಷಪಾತ, ಸರ್ವಾಧಿಕಾರಿ ಧೋರಣೆ ಮಾಡುತ್ತಿರುವ ನಾಯಕರುಗಳ ಈ ವಿಚಾರವನ್ನು ನಿಲ್ಲಿಸುವ ನಿಟ್ಟಿನಲ್ಲಿ ನಮ್ಮ ಹೋರಾಟ ನಡೆದಿತ್ತು.ಈ ಹೋರಾಟಕ್ಕೆ ಸಣ್ಣ ರೀತಿಯ ಸೋಲು ಬಂದಿದೆ.ಅದು ಸೋಲಲ್ಲ.ಸೈದ್ಧಾಂತಿಕ ಗೆಲುವು.ಮುಂದಿನ ದಿನ ಕ್ಷೇತ್ರದ ಜನತೆಯ ಜೊತೆ ಇದ್ದು ಹಿಂದುತ್ವದ ಪ್ರತಿಪಾದನೆ ಮಾಡಿಕೊಂಡು ಕ್ಷೇತ್ರದಲ್ಲಿ ಕೆಲಸ ಮಾಡಲಿದ್ದೇವೆ ಎಂದರು.


ಎಸ್‌ಡಿಪಿಐ, ಕಾಂಗ್ರೆಸ್ ಹೊಂದಾಣಿಕೆ:
ಎಸ್‌ಡಿಪಿಐ ಮತ್ತು ಕಾಂಗ್ರೆಸ್ ಹೊಂದಾಣಿಕೆಯಿಂದ ಕೆಲಸ ಮಾಡಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.ಕಾರಣ ಎಸ್‌ಡಿಪಿಐ ಅಭ್ಯರ್ಥಿಗಳು ಚುನಾವಣೆಯಲ್ಲಿ ಪ್ರಚಾರವನ್ನೂ ಮಾಡಿಲ್ಲ. ದೊಡ್ಡ ಪ್ರಮಾಣದ ನಿರೀಕ್ಷಿತ ಮತ ಅವರಿಗೆ ಸಿಗಲಿಲ್ಲ.ಇದನ್ನು ನೋಡಿದಾಗ ಅವರು ಹೊಂದಾಣಿಕೆಯಲ್ಲಿ ಹೋದಂತೆ ಕಾಣುತ್ತಿದೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.


ಚುನಾವಣಾ ಖರ್ಚು ಕಾರ್ಯಕರ್ತರೇ ನಿಭಾಯಿಸಿದ್ದಾರೆ:
ನಾವು ಚುನಾವಣೆಗೆ ಹೊರಟಾಗ ಆರ್ಥಿಕ ತೊಂದರೆ ಇತ್ತು. ಆದರೆ ಕಾರ್ಯಕರ್ತರೇ ಹಣ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯಲ್ಲಿ ಖರ್ಚು ಮಾಡಿದ್ದಾರೆ.ಚುನಾವಣೆಯನ್ನು ಕಾರ್ಯಕರ್ತರು ಹೇಗೆ ಮಾಡಬಹುದು ಎಂದು ಕಾರ್ಯಕರ್ತರು ತೋರಿಸಿದ್ದಾರೆ ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದರು.

LEAVE A REPLY

Please enter your comment!
Please enter your name here