ಕಾಣಿಯೂರು: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಅವರ ಗೆಲುವಿನಿಂದ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ನೆಲೆಸಿತ್ತು. ಭಾಗೀರಥಿಯವರ ಮೂಲ ಮನೆ ಮುರುಳ್ಯದಲ್ಲಿ ಮನೆಯಲ್ಲಿ ಕುಟುಂಬದ ಸದಸ್ಯರೆಲ್ಲರೂ ಮನೆಯ ಹೆಣ್ಣುಮಗಳು ಶಾಸಕಿಯಾಗಿ ಆಯ್ಕೆಯಾಗಿದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಭಾಗೀರಥಿ ಅವರ ಹಿರಿಯ ಅಕ್ಕ ಲಲಿತ ಬಿ.ಎನ್., ಭಾವ ನಿವೃತ್ತ ಅಧ್ಯಾಪಕ ಬಾಬು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಾನಕಿ ಮುರುಳ್ಯ, ಸಹೋದರರಾದ ಮುತ್ತಪ್ಪ, ಸುಭಾಷ್, ಸಹೋದರಿಯವರು ಮೊದಲಾದವರು ಸಂಭ್ರಮ ವ್ಯಕ್ತಪಡಿಸಿದರು.