‘ನನ್ನ ಗೆಲುವು ಕಾರ್ಯಕರ್ತರ ಗೆಲುವು-ಮತದಾರರ ನಿರೀಕ್ಷೆಗನುಗುಣವಾಗಿ ಕೆಲಸ ಮಾಡುತ್ತೇನೆ’-ಅಶೋಕ್ ಕುಮಾರ್ ರೈ

0

ಪುತ್ತೂರು:ತನ್ನ ಗೆಲುವು ಕಾರ್ಯಕರ್ತರ ಗೆಲುವು ಎಂದು ಪುತ್ತೂರಿನ ನೂತನ ಶಾಸಕ ಅಶೋಕ್ ಕುಮಾರ್ ರೈ ಪ್ರತಿಕ್ರಿಯಿಸಿದ್ದಾರೆ.
ಪ್ರತಿ ಕಾರ್ಯಕರ್ತರು ಮನೆಮನೆಗೆ ಭೇಟಿ ನೀಡಿ ಪ್ರಚಾರ ಮಾಡಿ ಮತಯಾಚನೆ ಮಾಡಿದ್ದಾರೆ.ನಮ್ಮ ನಾಯಕರೂ ಒಳ್ಳೆಯ ಸಹಕಾರ ನೀಡಿದ್ದಾರೆ.ಇದು ಕಾರ್ಯಕರ್ತರ ಗೆಲುವು.ನಮಗೆ ಗೆಲ್ಲುವ ನಿರೀಕ್ಷೆ ಖಂಡಿತ ಇತ್ತು.ಬಿಜೆಪಿಯನ್ನು ರಾಜ್ಯಾದ್ಯಂತ ಜನ ತಿರಸ್ಕರಿಸಿದ್ದರಿಂದಾಗಿ ಇಲ್ಲಿ ಪಕ್ಷೇತರ ಅಭ್ಯರ್ಥಿಗೆ ಹೆಚ್ಚು ಮತ ಹೋಗಿರೋದ್ರಿಂದ ನಮ್ಮ ಗೆಲುವಿನ ಅಂತರ ಕಡಿಮೆಯಾಗಿರಬಹುದು.ಆದರೆ ನಮಗೆ ಗೆಲ್ಲುವ ನಿರೀಕ್ಷೆ ಖಂಡಿತ ಇತ್ತು ಎಂದು ಹೇಳಿದ ಅಶೋಕ್ ಕುಮಾರ್ ರೈಯವರು ನಮ್ಮ ಕೆಲವು ಮತಗಳೂ ಪಕ್ಷೇತರ ಅಭ್ಯರ್ಥಿಗೆ ಹೋಗಿರಬಹುದು.ಅದನ್ನು ಹೇಳೋಕ್ಕಾಗಲ್ಲ ಎಂದರು.


ಚುನಾವಣೆಯಲ್ಲಿ ಜಿದ್ದಾಜಿದ್ದಿ ಸಹಜ.ಅವರವರು ಗೆಲ್ಲುವ ಬಗ್ಗೆ ಪ್ರಯತ್ನವನ್ನು ಎಲ್ಲರೂ ಮಾಡ್ತಾರೆ.ಇಲ್ಲಿ ಕಾಂಗ್ರೆಸ್ ಗೆದ್ದಿದೆ.ಜನ ನಮಗೆ ಮತ ಹಾಕುವ ಮೂಲಕ ಕಾಂಗ್ರೆಸನ್ನು, ಅಶೋಕ್ ರೈಯನ್ನು ಗೆಲ್ಲಿಸಿದ್ದಾರೆ. ಅಶೋಕ್ ರೈ ಮತ್ತು ಕಾಂಗ್ರೆಸ್ ಪಕ್ಷ ಎರಡನ್ನೂ ನೋಡಿ ಗೆಲ್ಲಿಸಿದ್ದಾರೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಇಷ್ಟರವರೆಗೆ ನೋಡಿದರೆ ಪುತ್ತೂರುನಲ್ಲಿ ಅಭಿವೃದ್ಧಿಯಾಗಿಲ್ಲ. 15 ವರ್ಷದ ಹಿಸ್ಟರಿ ನೋಡಿದರೆ ತಿಳಿಯುತ್ತೆ.ಅಲ್ಲಿ ಸರಿಯಾದ ಹಾಸ್ಪಿಟಲ್ ಇಲ್ಲ.ಡಯಾಲಿಸಿಸ್ ಸೆಂಟರ್‌ಗಳಿಲ್ಲ.ಒಳಚರಂಡಿ ಇಲ್ಲ.ಡ್ರೈನೇಜ್ ಸಿಸ್ಟಮ್ ಇಲ್ಲ.ಯುವಕರಿಗೆ ಇಷ್ಟು ವರ್ಷದಿಂದ ಉದ್ಯೋಗ ಕೊಡ್ತೇವೆ, ಕೊಡ್ತೇವೆ ಹೇಳಿದ್ದಾರೆ. ಆದರೆ ಕೆಲಸವಿಲ್ಲ.ಈ ಬಾರಿ ನಾವು ಗೆದ್ದಿದ್ದೇವೆ.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೂ ಬಂದಿದೆ.ಜವಾಬ್ದಾರಿ ನಮ್ಮ ಮೇಲಿ ಹೆಚ್ಚಿದೆ.ನಮ್ಮ ಜವಾಬ್ದಾರಿಯನ್ನು ಖಂಡಿತವಾಗಿಯೂ ಪ್ರಾಮಾಣಿಕವಾಗಿ ನಿಭಾಯಿಸುತ್ತೇವೆ,ಮತದಾರರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿ ತೋರಿಸುತ್ತೇವೆ ಎಂದು ಅಶೋಕ್ ಕುಮಾರ್ ರೈ ಪ್ರತಿಕ್ರಿಯೆ ನೀಡಿದ್ದಾರೆ.


ಕಾಂಗ್ರೆಸ್ ಸರಕಾರ ಈ ಹಿಂದೆ ಪ್ರಣಾಳಿಕೆಯಲ್ಲಿ ನೀಡಿದ ಕೆಲಸವನ್ನು ಮಾಡಿದೆ.ಈ ಬಾರಿ ಮತದಾರ ಕಾಂಗ್ರೆಸ್‌ಗೆ ಅವಕಾಶ ನೀಡಿದ್ದು ಪ್ರಣಾಳಿಕೆಯಲ್ಲಿ ನೀಡಿರುವ ಗ್ಯಾರಂಟಿ ಕಾರ್ಡ್ ಯೋಜನೆ ಅನುಷ್ಠಾನ ಮಾಡಿಯೇ ಮಾಡುತ್ತೇವೆ ಎಂದು ರೈ ಹೇಳಿದರು.


ಯಾರನ್ನು ಕಡೆಗಣಿಸಿದರೂ ಅವರ ನಿರ್ಧಾರವೇ ಅಂತಿಮ ಎಂದು ಬಿಜೆಪಿಯ ಕೆಲ ನಾಯಕರಲ್ಲಿತ್ತು.ಆದರೆ ಕಾರ್ಯಕರ್ತರನ್ನು ಕಡೆಗಣಿಸಿದೆ ಏನಾಗುತ್ತದೆ ಎಂಬ ಸಂದೇಶ ಪುತ್ತೂರು ಕ್ಷೇತ್ರದ ಮೂಲಕ ಬಿಜೆಪಿ ನಾಯಕರಿಗೆ ಹೋದಂತಾಗಿದೆ ಎಂದು ಹೇಳಿದ ಅಶೋಕ್ ಕುಮಾರ್ ರೈ, ಕಾಂಗ್ರೆಸ್‌ನಲ್ಲಿ ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಮತದಾರರ ನಿರೀಕ್ಷೆಯಂತೆ ಕೆಲಸ ಮಾಡುತ್ತೇವೆ ಎಂದರು.

LEAVE A REPLY

Please enter your comment!
Please enter your name here