ಮನೆಯಂಗಳದಿ ಔಷಧಿ ಸಸ್ಯ-2(ಅಮಟೆ ಮರ)

0

ಮೂಲಿಕಾ ಪರಿಚಯ:

ʼಅಮಟೆ ಕಾಯಿಗಳನ್ನು (ಸೊಪ್ಪಾದರೂ ಸರಿ) ಮರಹತ್ತಿ ಕೊಯ್ಯಬಾರದುʼ ಎನ್ನುವ ಅಚ್ಚರದ ಮಾತಿದೆ. ಸಾಮಾನ್ಯವಾಗಿ ಉದ್ದದೋಟಿಯ ಸಹಾಯದೊಂದಿಗೆ ಕೊಯ್ಯುವುದು ಪಧ್ಧತಿ. ಅಮಟೆ ಮರ ರೆಂಬೆಗಳು ಮದುೃಸಾರದವು. ಬಳುಕುರೋಧ ಶಕ್ತಿ ಬಲು ಕಡಿಮೆ. ಅಡ್ಡರೆಂಬೆಗಳು ಭಾರಬಿದ್ದಾಗ ಸುಲಭದಲ್ಲಿ ಹಿಸಿಯುತ್ತವೆ. ಏರುವವರಿಗೆ ಕೈಕಾಲುಗಳಲ್ಲಿ ಸಮಾನವಾದ ಹಿಡಿತ ಅವಶ್ಯ. ಇದರಿಂದಲೇ ಅಮಟೆಗೆ ʼಮರ್ಕಟಾಮ್ರʼವೆನ್ನುವ ಹೆಸರು ಬಂದಿದೆ. (ಮರ್ಕಟ ವರ್ಗಕ್ಕೆ ಎಲೆ, ಹಣ್ಣುಗಳೂ ಬಲು ಪ್ರೀತಿಯವೂ ಹೌದು). ಹಣ್ಣುಗಳು, ಕಾಯಿ, ಅಡುಗೆಯಲ್ಲಿ ಔಷಧವಾಗಿ ಸಮಾನ ಬಳಕೆಯವು. ಉಪ್ಪಿನಕಾಯಿ, ಇತರ ವ್ಯಂಜನಗಳಿಗೆ ಯೋಗ್ಯ ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಒಳ್ಳೆಯದು. ಎಲೆ, ಹೂಗಳೂ ರುಚಿಕರ ಅಡುಗೆ ದ್ರವ್ಯಗಳು. ಗಂಟಲು, ಕಿವಿ, ಮೂಗು, ಕಣ್ಣುಗಳ ತೊಂದರೆಗಳಿಗೆ ಪರಿಣಾಮಕಾರಿ ಮದ್ದು. ಬೆಂಕಿಹುಣ್ಣು, ಪೈತ್ತಿಕವ್ರಣ, ವಿಷವ್ರಣಗಳು, ಚರ್ಮದ ವರ್ಣರಾಹಿತ್ಯ ಇವುಗಳಿಗೆ ಎಲೆ, ತೊಗಟೆಗಳು ಉಪಯುಕ್ತ. ಸ್ತ್ರಿರೋಗಗಳಲ್ಲಿ ತೊಗಟೆ ಹಾಗೂ ಬೇರುಗಳು ಒಳ್ಳೆಯ ಔಷಧಗಳು. ಜಾನುವಾರುಗಳ ಔಷಧ. ಕರುಗಳಿಗೆ ವಿಶೇಷ. ಕರಾವಳಿಯಲ್ಲಿ ಆರ್ಯುವೇದದ ʼಅಂಬಷ್ಟʼವಾಗಿ ಪ್ರಸಿಧ್ಧ. ಇಡಿಯ ಏಷ್ಯಾ ಪ್ರದೇಶಗಳಲ್ಲಿ ಪಸರಿಸಿದೆ. ಹಲವಾರು ಒಳ ಪ್ರಭೇದಗಳೂ ಇವೆ. ಪ್ರಮುಖವಾಗಿ ಬಿಳಿ, ಕಾರೆ, ಕಾಡು-ಮೂರು ಭೇದಗಳು. ಸದ್ಯ ಹಣ್ಣು ತಿನ್ನುವ ಅಭ್ಯಾಸ ಕಡಿಮೆಯಾಗಿದ್ದರೂ, ಗುಣದಲ್ಲಿ ಹಿರಿದು. ಮಿಡಿಗಳ ಉಪ್ಪಿನಕಾಯಿ ರುಚಿಯಲ್ಲಿ ಮಾವಿಗೆ ಕಡಿಮೆಯದೇನಲ್ಲ.

ಉಪಯೋಗಗಳು:

ಕೈಕಾಲುಗಳ ಅವಶತೆ, ಬಲಹೀನತೆ, ಮಿತಿಗಿಂತ ಹೆಚ್ಚು ಬಳುಕುವಿಕೆ ಇವುಗಳಿಗೆ:
ಅಂಬಟೆ ಎಲೆ ಹಾಗೂ ಹುಣಸೆ ಎಲೆಗಳನ್ನು ಹಾಕಿ ಬೇಯಿಸಿದ ನೀರನ್ನು ತಣಿಸಿ (ತಣ್ಣೀರು ಸೇರಿಸಕೂಡದು) ಅದರಲ್ಲಿ ಸ್ನಾನ, ಕೈಕಾಲುಗಳಿಗೆ ಧಾರೆ ಹಿಡಿಯುವುದು. 2 ರಿಂದ 3 ವಾರಗಳ ಕಾಲ. ಪುನರಾವರ್ತನೆ ಬೇಕಾಗಬಹುದು.

ಸೂಚನೆ : 1) ಒಂದು ಬಕೆಟ್‌ ನೀರಿಗೆ ಎರಡೂ ಕೈಗಳನ್ನು ಸೇರಿಸಿ ಬಾಚಿಕೊಳ್ಳುವಷ್ಟು ಅಂಬಟೆ ಎಲೆ ಹಾಗೂ ಅದರ ಅರ್ಧ ಪ್ರಮಾಣ ಹುಣಸೆ ಎಲೆಗಳನ್ನು ಸೆರಿಸುವುದು ಉತ್ತಮ. 2) ಸ್ನಾನಕ್ಕೆ 2 ಗಂಟೆ ಮೊದಲು ಹಣ್ಣು ಎಲೆಗಳ ರಸ, ಎಣ್ಣೆ ಸೇರಿಸಿ ಕುದಿಸಿದ ತೈಲ ಲೇಪಿಸಿಕೊಂಡರೆ ಪರಿಣಾಮ ಹೆಚ್ಚುವುದು.

ತರಕಾರಿ ಗಡ್ಡೆ ಹಾಗೂ ಎಲೆಗಳ ತುರಿಕೆ ನಿವಾರಣೆಗೆ:
ಅಂಬಟೆ ಎಲೆಗಳಲ್ಲಿ ಹುದುಗಿಸಿಟ್ಟು ಉಗಿಯಲ್ಲಿ ಒಮ್ಮೆ ಬೇಯಿಸಿ ನಂತರ ಅಡುಗೆಯಲ್ಲಿ ಬಳಕೆ. ಉದಾ: ಕಾಡುಸೂರಣಗಡ್ಡೆ ಕತ್ತರಿಸಿ ಹೋಳುಗಳನ್ನಾಗಿಸಿ ಇಡ್ಲಿ ಪಾತ್ರೆಯಲ್ಲಿ ಅಂಬಟೆ ಸೊಪ್ಪುಗಳನ್ನು ಹೊದೆಸಿಟ್ಟು ಒಮ್ಮೆ ಬೇಯಿಸಿಕೊಂಡರೆ ತುರಿಕೆಯಾಗದ ರುಚಿಯಾದ ಪದಾರ್ಥ ತಯಾರಿಯಾಗುವುದು. ಸೂಚನೆ: ಸೂರಣಗಡ್ಡೆಗಳಲ್ಲಿ ವಿಷಪ್ರಾಯವಾದವುಗಳಿವೆ. ಸೇವನಾಬಳಕೆಯಲ್ಲಿ ಎಚ್ಚರ ಅವಶ್ಯ.

ಅಂಬಟೆಮರ ಮುಡುಕು ವಾತ ನಿವಾರಣೆಯಲ್ಲಿ ಹೆಸರುಗಳು:
ಕನ್ನಡ: ಅಮಟೆಕಾಯಿ ಮರ, ಅಂಬಟೆ, ಅಂಬಾಡೆ ಮರ
ತುಳು: ಅಂಬಟೆ ಮರೊ
ಮಲಯಾಳ: ಅಂಬಳಮ್
ತೆಲುಗು: ಕೊಂಡ ಆಮಿಡಿ
ಮರಾಠಿ: ಅಂಬಾಡೀ
ಹಿಂದಿ: ಅಮಾರೀ
ಸಂಸ್ಕೃತ: ಆಮ್ರಾತಕ
ಇಂಗ್ಲಿಷ್:‌ Great hog plum
ಸಸ್ಯಶಾಸ್ತ್ರೀಯ: Spondias pinnata (L.f) Kurz
ಕುಟುಂಬ:
ಉಪಯೋಗ: ಕಾಯಿ, ಹಣ್ಣು, ತೊಗಟೆ

ಮೂಲ ಬರಹ: ಪಿ ಎಸ್‌ ವೆಂಕಟರಾಮ ದೈತೋಟ

LEAVE A REPLY

Please enter your comment!
Please enter your name here