ರಿಕ್ಷಾ ಚಾಲಕ ಅಬ್ದುಲ್ಲಾ ಹೃದಯಾಘಾತದಿಂದ ನಿಧನ

0

ಪುತ್ತೂರು: ಮರಿಲ್ ಹನಫಿ ಮಸೀದಿಯ ಬಳಿಯ ನಿವಾಸಿಯಾಗಿದ್ದು ಪ್ರಸ್ತುತ ಸಂಪ್ಯದಲ್ಲಿ ವಾಸ್ತವ್ಯವಿದ್ದ ದಿ.ಮೊಹಮ್ಮದ್‌ರವರ ಪುತ್ರ ರಿಕ್ಷಾ ಚಾಲಕ ಅಬ್ದುಲ್ಲಾ (62ವ.)ರವರು ಹೃದಯಾಘಾತದಿಂದ ಮೇ 15ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.


ಅಬ್ದುಲ್ಲಾ ಅವರು ಈ ಹಿಂದೆ ವಿದೇಶದಲ್ಲಿದ್ದು ಊರಿಗೆ ಬಂದ ಬಳಿಕ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದರು. ಮೃತರು ತಾಯಿ, ಪತ್ನಿ, ಓರ್ವ ಪುತ್ರ, ಓರ್ವ ಪುತ್ರಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here