ಚಾರ್ವಾಕ: ಟ್ರಾನ್ಸ್ ಫಾರ್ಮರ್‌ನಲ್ಲಿ ವಿದ್ಯುತ್ ಶಾಕ್, ಪವರ್‌ಮ್ಯಾನ್‌ಗೆ ಗಾಯ

0

ಕಾಣಿಯೂರು: ಕಡಬ ತಾಲೂಕಿನ ಚಾರ್ವಾಕ ಗ್ರಾಮದಲ್ಲಿ ಮೆಸ್ಕಾಂ ಪವರ್‌ಮ್ಯಾನ್ ವಿದ್ಯುತ್ ಶಾಕ್ ಗೊಳಪಟ್ಟು, ಕಂಬದಿಂದ ಎಸೆಯಲ್ಪಟ್ಟು ಗಾಯಾಗೊಂಡ ಘಟನೆ ಮೇ 15ರಂದು ನಡೆದಿದೆ. ಮೆಸ್ಕಾಂ ಪವರ್‌ಮ್ಯಾನ್ ಎಡಮಂಗಲ ನಿವಾಸಿ ನಾರಾಯಣ ಪಿ ಎಂಬವರು ಗಾಯಗೊಂಡವರು. ಚಾರ್ವಾಕದ ಎಣ್ಮೂರಿನಲ್ಲಿ ವಿದ್ಯುತ್ ಟ್ರಾನ್ಸ್
ಫಾರ್ಮರ್ ನಲ್ಲಿ ಸಮಸ್ಯೆ ಇದೆ ಎಂದು ಗ್ರಾಹಕರು ಮಾಹಿತಿ ನೀಡಿರುವ ಹಿನ್ನೆಲೆಯಲ್ಲಿ ಅಲ್ಲಿ ತೆರಳಿ ಟ್ರಾನ್ಸ್ ಫಾರ್ಮರ್ ಏರಿ ಫ್ಯೂಸ್ ಹಾಕುತ್ತಿದ್ದಾಗ ವಿದ್ಯುತ್ ಶಾಕ್ ಗೆ ಒಳಗಾಗಿ ಕೆಳಗೆ ಎಸೆಯಲ್ಪಟ್ಟಿದ್ದಾರೆ ಎನ್ನಲಾಗಿದೆ. ತಕ್ಷಣ ಗಾಯಳುವನ್ನು ಸ್ಥಳೀಯ ಕಾಣಿಯೂರಿನ ಆಸ್ಪತ್ರೆಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾರಾಯಣ ಅವರು ಕಂಬದಿಂದ ಎಸೆಯಲ್ಪಟ್ಟು ಕೈ ಮೂಳೆಗೆ ಗಾಯವಾಗಿದೆ ಹಾಗೂ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

LEAVE A REPLY

Please enter your comment!
Please enter your name here