ಮುಂಬೈ LED EXPO – ಪಶುಪತಿ ಶರ್ಮ ಭಾಗವಹಿಸುವಿಕೆ

0

ಪುತ್ತೂರು:ಮುಂಬಯಿಯಲ್ಲಿ ನಡೆದ ಮೂರು ದಿನಗಳ ಎಲ್‌ಇಡಿ ಎಕ್ಸ್‌ಪೊದಲ್ಲಿ ದರ್ಬೆ ಫಿಲೋಮಿನಾ ಕಾಲೇಜಿನ ಎದುರುಗಡೆ ವ್ಯವಹರಿಸುತ್ತಿರುವ ಪಶುಪತಿ ಲೈಟ್ಸ್ & ಇಲೆಕ್ಟ್ರಿಕಲ್ ಮಾಲಕ ಪಶುಪತಿ ಶರ್ಮರವರು ಭಾಗವಹಿಸಿ ಪ್ರತಿಷ್ಠಿತ ಬ್ರಾಂಡ್‌ಗಳ ನೂತನ ಪ್ರಾಡಕ್ಟ್‌ಗಳು, ಇತ್ತೀಚಿನ ಹೊಸ ರೀತಿಯ ಬೆಳವಣಿಗೆ ಬಗ್ಗೆ ತರಬೇತಿ ಮತ್ತು ಮಾಹಿತಿ ಪಡೆದು ಕೊಂಡರು.


ಭಾರತದ ಪ್ರತಿಷ್ಠಿತ ಬ್ರಾಂಡ್‌ಗಳ ಸ್ಟ್ರಿಪ್ ಲೈಟ್ಸ್, ಪ್ರೊಫೈಲ್‌ ಲೈಟ್ಸ್, ಸಿಲಿಕಾನ್ ಪ್ರೊಫೈಲ್, ಫ್ಯಾನ್ಸಿ ಲೈಟ್ಸ್‌ ಹಾಗೂ ಕಾಬ್ ಲೈಟ್ಸ್‌ಗಳ ಡೀಲರ್‌ಶಿಪ್ ಪಡಕೊಂಡಿರುತ್ತಾರೆ. ಈ ಎಲ್‌ಇಡಿ ಎಕ್ಸ್‌ಪೊದಲ್ಲಿ 200 ಕ್ಕೂ ಮಿಕ್ಕಿ ಭಾರತದ ಹಾಗೂ ಅಂತರ್ರಾಷ್ಟ್ರೀಯ ಲೈಟಿಂಗ್ಸ್ ಬ್ರಾಂಡ್‌ಗಳು ಭಾಗವಹಿಸಿದ್ದವು. ವಿವಿಧ ಸ್ಟಾಲ್‌ಗಳು ಹಾಗೂ ಕಂಪೆನಿಗಳ ಲೈಟಿಂಗ್ಸ್ ಪ್ರದರ್ಶನದೊಂದಿಗೆ ಲೈಟಿಂಗ್‌ನ ಬಗ್ಗೆ ವಿವಿಧ ಮಾಹಿತಿ ಕಾರ್ಯಾಗಾರಗಳಲ್ಲಿಯೂ ಸಹ ಪಶುಪತಿ ಶರ್ಮರವರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here