ರಂಗ ಶಿಕ್ಷಣ ತರಬೇತಿಗೆ ಅರ್ಜಿ ಆಹ್ವಾನ

0

ಮಂಗಳೂರು: ರಂಗಾಯಣದ ರಂಗಶಿಕ್ಷಣದಲ್ಲಿ 2023-24ನೇ ಸಾಲಿನಲ್ಲಿ 10 ತಿಂಗಳ ಡಿಪ್ಲೊಮಾ ಕೋರ್ಸ್‌ಗಳನ್ನು ಸೇರಬಯಸುವ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು, ಕನಿಷ್ಠ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿರಬೇಕು. 18 ರಿಂದ 28 ವರ್ಷದೊಳಗಿರಬೇಕು. ಆಯ್ಕೆಯಾದವರಿಗೆ ವಸತಿ ವ್ಯವಸ್ಥೆ ಇದ್ದು, ಮಾಹೆಯಾನ 5,೦೦೦ರೂ.ಗಳ ವಿದ್ಯಾರ್ಥಿ ವೇತನ ನೀಡಲಾಗುವುದು.ವೆಬ್‌ಸೈಟ್ https://rangayanamysore.karnataka.gov.in ನಲ್ಲಿ ಅರ್ಜಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ಸಲ್ಲಿಸಬೇಕು. ಸಾಮಾನ್ಯ ವರ್ಗದವರಿಗೆ 230 ಹಾಗೂ ಪ.ಜಾ, ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 180 ರೂ.ಗಳ ಡಿಡಿಯನ್ನು ಉಪ ನಿರ್ದೆಶಕರು, ರಂಗಾಯಣ, ಮೈಸೂರು ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ಜೂನ್ 5ರ ಸಂಜೆ 5.30ರೊಳಗೆ ತಲುಪುವಂತೆ ಕಳುಹಿಸಬೇಕು. ಸಂದರ್ಶನದ ದಿನಾಂಕವನ್ನು ಅಭ್ಯರ್ಥಿಗಳಿಗೆ ಪತ್ರದ ಮುಖೇನ ತಿಳಿಸಲಾಗುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821&2512639, 9448938661, 9148827720, 8867514311 ಸಂಪರ್ಕಿಸುವಂತೆ ರಂಗಾಯಣದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here