ಪುತ್ತೂರು: ಸರಕಾರ ಬದಲಾದ ತಕ್ಷಣ ಏನು ಬೇಕಾದರು ಮಾಡಬಹುದ?ಇದು ನೂರಕ್ಕೆ ನೂರು ಕಾಂಗ್ರೆಸ್ ಮಾಡಿದ ಕಿತಾಪತಿ ಎಂದು ಡಾ.ಪ್ರಭಾಕರ ಭಟ್ ಕಲ್ಲಡ್ಕ ಅವರು ಹೇಳಿದ್ದಾರೆ.
ಪೊಲೀಸರಿಂದ ಹಲ್ಲೆಗೊಳಗಾಗಿ ಗಾಯಗೊಂಡು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾದವರನ್ನು ಭೆಟಿ ಮಾಡಿ ವಿಚಾರಿಸಿದ ಅವರು ಪತ್ರಿಕಾ ಮಾಧ್ಯಮದ ಜೊತೆ ಮಾತನಾಡಿದರು. ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ ಡಿವೈಎಸ್ಪಿ ಅವರನ್ನು ಅಮಾನತು ಮಾಡಬೇಕು. ಕಾರ್ಯಕರ್ತರಿಂದ ಸಣ್ಣ ಪುಟ್ಟ ವ್ಯತ್ಯಾಸ ಆಗುತ್ತದೆ. ಹಾಗೆಂದು ಅದು ಅಕ್ಷಮ್ಯ ಅಪರಾಧ ಅಲ್ಲ. ನಾವು ಇದನ್ನು ಹೀಗೆ ಬಿಡುವುದಿಲ್ಲ.ಇದರ ಹಿಂದಿನ ಶಕ್ತಿ ಯಾರೆಂದು ಗೊತ್ತಾಗಬೇಕು.ಯಾರ ಒತ್ತಡ ಎಂದು ಹೇಳಲಿ. ಹಿಡಿ, ತಡಿ, ಬಡಿ ಎಂದು ನಾವು ಇವತ್ತಿನ ತನಕ ಯಾರಿಗೂ ಹೇಳಲಿಲ್ಲ. ಸರಕಾರ ಬದಲಾದ ಕೂಡಲೆ ಇಂತಹ ಘಟನೆ ನಡೆಯುವುದು ಒಳ್ಳೆಯ ಲಕ್ಷಣ ಅಲ್ಲ ಎಂದು ಅವರು ಹೇಳಿದರು.
ಈ ಸಂದರ್ಭ ಕಿಶೋರ್ ಬೊಟ್ಯಾಡಿ, ಮುರಳಿಕೃಷ್ಣ ಹಸಂತಡ್ಕ ಸಹಿತ ಹಲವಾರು ಮಂದಿ ಜೊತೆಗಿದ್ದರು.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ