





ಬಂಟ್ವಾಳ: ಮಂಗಳೂರು ಶಾಸಕ, ಕಡಬ ಮೂಲದ ಯು.ಟಿ. ಖಾದರ್ ಅವರು ಬುಧವಾರ ಸಂಜೆ ಬಂಟ್ವಾಳದಲ್ಲಿ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿಯವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿ ಆಶೀರ್ವಾದ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜನಾರ್ದನ ಪೂಜಾರಿಯವರು ನಮ್ಮ ಪಕ್ಷದ ಹಿರಿಯ ನಾಯಕರು. ತನ್ನ ವಿದ್ಯಾರ್ಥಿ ಜೀವನದಲ್ಲಿ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಬಿ.ಜನಾರ್ದನ ಪೂಜಾರಿಯವರು ಮಾರ್ಗದರ್ಶನ ಮಾಡಿದ್ದರು. ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಸಾಮಾಜಿಕ ಬದ್ಧತೆ ನನ್ನ ರಾಜಕೀಯ ಜೀವನದಲ್ಲಿ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದೆ ಎಂದರು.
ನಾಮಪತ್ರ ಸಲ್ಲಿಸುವ ಮೊದಲು ಅವರ ಆಶೀರ್ವಾದ ಪಡೆದುಕೊಂಡಿದ್ದೆ, ಇದೀಗ ಚುನಾವಣೆಯಲ್ಲಿ ಗೆಲುವು ಸಾಽಸಿದ ಬಳಿಕವೂ ಅವರ ಆಶೀರ್ವಾದ ಪಡೆದುಕೊಂಡಿದ್ದೇನೆ. ಕಾಂಗ್ರೆಸ್‌ನ ಎಲ್ಲಾ ಕಾರ್ಯಕರ್ತರನ್ನು ಒಂದು ಕುಟುಂಬದ ರೀತಿಯಲ್ಲಿ ನೋಡಿಕೊಂಡು ಸರ್ವರನ್ನು ಜೊತೆಯಾಗಿ ಕರೆದೊಯ್ಯುವಂತೆ ಅವರು ಸಲಹೆ ನೀಡಿದ್ದು ಅದನ್ನು ಸ್ವೀಕರಿಸಿ ಪಕ್ಷವನ್ನು ಬಲಿಷ್ಠಗೊಳಿಸಿ, ಪಕ್ಷ ಕಾರ್ಯಕ್ರಮವನ್ನು ಜನರಿಗೆ ಮುಟ್ಟಿಸಿ ಸೌಹಾರ್ದ, ಸಾಮರಸ್ಯ, ಅಭಿವೃದ್ಧಿಯ ಸಮಾಜ ನಿರ್ಮಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.


ಅಂಬೇಡ್ಕರ್ ವಿರೋಧಿ ಸರಕಾರ ತೊಲಗಿದೆ. ಅಂಬೇಡ್ಕರ್ ಸಂವಿಧಾನಕ್ಕೆ ಪರವಾಗಿರುವ ಕಾಂಗ್ರೆಸ್ ಸರಕಾರ ಬಂದಿರುವುದೇ ಸಂತೋಷದ ಸಂಗತಿ. ನನಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೂ ಅದನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷಕ್ಕೆ, ಕ್ಷೇತ್ರದ ಜನತೆಗೆ ಗೌರವ ತರುವ ಕೆಲಸವನ್ನು ಮಾಡುವುದಾಗಿ ತಿಳಿಸಿದರು. ಯಾವುದೇ ಅಪೇಕ್ಷೆಯನ್ನು ನಾನು ಹೊಂದಿಲ್ಲ, ಹೈಕಮಾಂಡ್ ನೀಡುವ ತೀರ್ಮಾನಕ್ಕೆ ಬದ್ದನಾಗಿದ್ದೇನೆ.ಜನ ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ಕೆಲಸ ಮಾಡುತ್ತೇನೆ ಎಂದು ಖಾದರ್ ತಿಳಿಸಿದರು.





ಮುಖ್ಯಮಂತ್ರಿ ಆಯ್ಕೆ ಆದ ಕೂಡಲೇ ನಿಯಮಾನುಸಾರವಾಗಿ ಗ್ಯಾರಂಟಿ ಕಾರ್ಡ್ ಅನುಷ್ಠಾನಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ಅವರು ಅರ್ಹತೆ ಇರುವ ಎಲ್ಲರೂ ಗ್ಯಾರಂಟಿ ಕಾರ್ಡ್ ಸವಲತ್ತುಗಳನ್ನು ಪಡೆಯಲಿದ್ದಾರೆ ಎಂದರು. ಪಕ್ಷದ ಪ್ರಮುಖರಾದ ಮಮತಾ ಡಿ.ಎಸ್. ಗಟ್ಟಿ, ಚಂದ್ರಹಾಸ ಕರ್ಕೇರ, ಸಂತೋಷ್ ಶೆಟ್ಟಿ, ಈಶ್ವರ ಉಳ್ಳಾಲ್, ಹಾಸಿರ್ ಪೇರಿಮಾರ್, ಅಬ್ದುಲ್ ರಝಾಕ್ ಕುಕ್ಕಾಜೆ, ಹುಸೈನ್ ಕುಂಞಮೋನ್, ಮಲ್ಲಿಕ್ಕಾ ಪಕ್ಕಳ, ಅರುಣ್ ಡಿಸೋಜಾ, ದೇವದಾಸ್ ಭಂಡಾರಿ, ದೀಪಕ್ ಪಿಲಾರ್, ಸುರೇಶ್ ಭಟ್ನಾಗರ್, ಮುಸ್ತಾಫ ಹರೆಕಳ, ಮರಳೀಧರ ಶೆಟ್ಟಿ, -ರೂಕ್ ದೇರಳಕಟ್ಟೆ, ನವಾಝ್ ನರಿಂಗಾಣ, ಶಮೀರ್ ಫಜೀರ್, ದಿನೇಶ್ ಪೂಜಾರಿ, ಮಹಮ್ಮದ್ ಮುಕ್ಕಚ್ಚೇರಿ ಮತ್ತಿತರರು ಉಪಸ್ಥಿತರಿದ್ದರು.


 
            