ಮತ್ತೊಮ್ಮೆ ನಾವೆಲ್ಲ ಒಂದಾಗಿ ಪಕ್ಷ, ಸಂಘಟನೆ, ದೇಶವನ್ನು ಕಟ್ಟೋಣ-ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕರೆ

0

ಪುತ್ತೂರು: ಒಟ್ಟಾರೆಯಾಗಿ ನಡೆದಿರುವ ಘಟನೆಯನ್ನು ಮರೆತು ಮತ್ತೊಮ್ಮೆ ನಾವೆಲ್ಲ ಒಂದಾಗಿ ಪಕ್ಷ, ಸಂಘಟನೆ, ದೇಶವನ್ನು ಕಟ್ಟೋಣ ಎಂದು ವಿಜಯಪುರ ನಗರ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.


ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಂದ ಹಲ್ಲೆಗೊಳಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳ ಆರೋಗ್ಯ ವಿಚಾರಣೆಗಾಗಿ ಮತ್ತು ಸಂಘಟನೆಯೊಳಗಿನ ಮನಸ್ತಾಪದ ಕುರಿತು ಸುದೀರ್ಘವಾಗಿ ಚರ್ಚಿಸಿ ಸರಿ ಪಡಿಸುವ ನಿಟ್ಟಿನಲ್ಲಿ ಪಕ್ಷದ ಸೂಚನೆಯಂತೆ ಪುತ್ತೂರಿಗೆ ಆಗಮಿಸಿದ ಯತ್ನಾಳ್ ಪುತ್ತೂರು ಸಂಘ ಕಾರ್ಯಾಲಯಕ್ಕೆ ಭೇಟಿ ನೀಡಿ ಬಳಿಕ ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ರಾಜಕೀಯ ವ್ಯವಸ್ಥೆಯಲ್ಲಿ ನನಗೂ ಇಂತಹ ಅನುಭವ ಆಗಿದೆ. ಈಗ ಎನು ಘಟನೆ ಆಗಿದೆಯೋ ಅದನ್ನು ಮತ್ತೆ ಮತ್ತೆ ಕೆದಕುವುದಕ್ಕಿಂತ ನಾವು ಒಂದಾಗಬೇಕು. ಯಾಕೆಂದರೆ ಮುಂದೆ ಒಂದು ವರ್ಷದಲ್ಲಿ‌ ಲೋಕಸಭೆ ಚುನಾವಣೆ ಬರಲಿದೆ. ಕರ್ನಾಟಕದಲ್ಲಿ ಇವತ್ತು ಕಾಂಗ್ರೆಸ್ ಸರಕಾರ ಬಂದಿದೆ. ಕಾಂಗ್ರೆಸ್ ಬಂದ ಮೇಲೆ ಮುಸ್ಲಿಮರ ಆಟ ಪ್ರಾರಂಭವಾಗಿದೆ. ನಮ್ಮದು ನೇರ ನೇರ ಪೈಟ್, ನಮಗೆ ಮುಸ್ಲಿಂ ಮತ ಬೇಡ ಎಂದು ನಾನು ಹೇಳಿರುವವನು. ನನ್ನ ಕಚೇರಿಗೆ ಯಾರು ಮುಸ್ಲಿಮರು, ಬುರ್ಕಾ ಹಾಕುವವರು ಬರಬಾರದು ಎಂದಿದ್ದೆ. ಈ ಕುರಿತು ನನ್ನ ಬಗ್ಗೆ ಪ್ರಧಾನ ಮಂತ್ರಿ ತನಕವೂ ದೂರು ಹೋಗಿತ್ತು. ದಕ್ಷಿಣ ಕನ್ನಡ ಹಿಂದುತ್ವದ ಭದ್ರಕೋಟೆ. ಹಾಗಾಗಿ ಮುಂದೆ ಬರಲಿರುವ ಲೋಕಸಭಾ ಚುನಾವಣೆಗೆ ಯಾವುದೇ ರೀತಿಯಲ್ಲಿ ತೊಂದರೆ ಆಗ ಬಾರದೆಂದು ,ರಾಜ್ಯಾಧ್ಯಕ್ಷರ ಜೊತೆ ನಿನ್ನೆ ಮಾತನಾಡಿದ್ದೆ. ಅವರ ಭಾವನೆ ಹೇಳಿಕೊಂಡಿದ್ದಾರೆ. ಸುಳ್ಳು ಮಾಹಿತಿಗಳಿಂದ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು. ನಾನು ಹೇಗೆ ಎಲ್ಲವನ್ನು ನಿಯಂತ್ರಣ ಮಾಡಿ ಗೆದ್ದು ಬಂದಿದ್ದೇನೋ ಅದೇ ರೀತಿ ಇಲ್ಲೂ ಸಹ ಪಕ್ಷಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ, ಸಂಘಪರಿವಾರಕ್ಕೆ ಕೆಟ್ಟ ಹೆಸರು ಬಾರದ ರೀತಿಯಲ್ಲಿ ನಾವೆಲ್ಲ ಸೇರಿ ಒಂದಾಗಿ, ಮುಂದೆ ಹೋಗುವ ಎಂದು ಕಾರ್ಯಕರ್ತರಲ್ಲಿ ವಿನಂತಿ‌ ಮಾಡುತ್ತೇನೆ ಎಂದರು. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮದಾಸ್ ಬಂಟ್ವಾಳ್, ಸುಧೀರ್ ಶೆಟ್ಟಿ ಕಣ್ಣೂರು, ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ನಗರ ಮಂಡಲದ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್ ಸ್ವಾಗತಿಸಿದರು. ಬಿಜೆಪಿ ಮಂಡಲದ ವತಿಯಿಂದ ಯತ್ನಾಳ್ ಅವರಿಗೆ ಶಲ್ಯ, ಹೂಗುಚ್ಚ ನೀಡಿ ಸ್ವಾಗತಿಸಲಾಯಿತು. ಈ ಸಂದರ್ಭ ಬಿಜೆಪಿ ಪರಾಜಿತ ಅಭ್ಯರ್ಥಿ ಅಶಾ ತಿಮ್ಮಪ್ಪ ಗೌಡ, ಜಿಲ್ಲಾ ಕಾರ್ಯದರ್ಶಿ ಜಯಂತಿ ನಾಯಕ್ , ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತೀಶ್ ಕುಮಾರ್ ಶಾಂತಿವನ, ಜಯಶ್ರೀ ಎಸ್ ಶೆಟ್ಟಿ, ಯುವರಾಜ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ್ ರಾವ್ ಬಪ್ಪಳಿಗೆ, ಹರಿಪ್ರಸಾದ್ ಯಾದವ್, ಸುರೇಶ್ ಆಳ್ವ, ರಾಜೇಶ್ ಬನ್ನೂರು, ವಿದ್ಯಾ ಆರ್ ಗೌರಿ, ಗೌರಿ ಬನ್ನೂರು, ಸಂತೋಷ್ ಕೈಕಾರ, ಮುರಳಿಕೃಷ್ಣ ಹಸಂತಡ್ಕ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here