ಹೆಸರಾಂತ ಪಾದರಕ್ಷೆ ಮಳಿಗೆ ವಾಕ್ ವೇ ಶುಭಾರಂಭ…

0

ಬಹಳ ಹಿಂದಿನಿಂದಲೂ ನಾವು ಮೆಟ್ರೋ ಬ್ರ್ಯಾಂಡ್ಸ್ ಪ್ರಿಯರು – ಲಕ್ಷ್ಮೀಕಾಂತ್ ಆಚಾರ್ಯ

ಪುತ್ತೂರು : ಭಾರತದ ಪ್ರಮುಖ ನಗರಗಳ ಶಾಪಿಂಗ್ ಸೆಂಟರ್ ಗಳ ಸಹಿತ , ಸುಮಾರು 60 ಕ್ಕೂ ಮಿಕ್ಕಿ ಮಳಿಗೆಯನ್ನು ತೆರೆದು , ಗ್ರಾಹಕ ಜನತೆಯ ಮೆಚ್ಚುಗೆಯ ಮಳಿಗೆಯಾಗಿ ಗುರುತಿಸಿಕೊಂಡಿರುವ ಮುಂಬೈನ ಹೆಸರಾಂತ ಪಾದರಕ್ಷೆ ಮಳಿಗೆ , ಮೆಟ್ರೋ ಬ್ರ್ಯಾಂಡ್ಸ್ ಲಿಮಿಟೆಡ್ ಇದರ ಸಹಸಂಸ್ಥೆ , ಜಿಲ್ಲೆಯ ನಾಲ್ಕನೇ ಶಾಖೆ “ವಾಕ್ ವೇ ” ಮೇ.19. ರಂದು ಜಿ.ಎಲ್ ಒನ್ ಮಾಲ್ ಇಲ್ಲಿ ಅಧಿಕೃತವಾಗಿ ಶುಭಾರಂಭಗೊಂಡಿತು.

ಜಿ.ಎಲ್ . ಗ್ರೂಪ್ ಇದರ ಮ್ಯಾನೇಜಿಂಗ್ ಡೈರೆಕ್ಟರ್ ಲಕ್ಷ್ಮೀಕಾಂತ್ ಆಚಾರ್ಯ ಮಳಿಗೆ ಉದ್ಘಾಟಿಸಿ ಮಾತನಾಡಿ , ವಾಕ್ ವೇ ಮಳಿಗೆ ದೇಶದಾದ್ಯಂತ ಮಾನ್ಯತೆ ಹೊಂದಿರುವಂಥ ಮಳಿಗೆಯಾಗಿದ್ದು , ಪುತ್ತೂರಿನಲ್ಲಿ ಆರಂಭಗೊಂಡಿರುವಂಥದ್ದು ಹೆಮ್ಮೆಯ ವಿಚಾರ. ಒಳ್ಳೇಯ ಗುಣಮಟ್ಟ ಅದೇ ರೀತಿ ಯೋಗ್ಯ ಬೆಲೆ ಕೂಡ ಹೊಂದಿದೆ.ನಾವು ಕೂಡ ಬಲು ಹಿಂದಿನಿಂದಲೂ ಗ್ರಾಹಕರಾಗಿದ್ದೇವೆ. ಉತ್ತಮ ವ್ಯವಹಾರದಿಂದ ಮಳಿಗೆ ಅಭಿವೃದ್ಧಿಯತ್ತ ಸಾಗಲಿಯೆಂದು ಹಾರೈಸಿದರು.


ಜಿ.ಎಲ್.ಗ್ರೂಪ್ ನ ಇನ್ನೋರ್ವ ಮ್ಯಾನೇಜಿಂಗ್ ಡೈರೆಕ್ಟರ್ ಸುಧನ್ವ ಆಚಾರ್ಯ ಮಾತನಾಡಿ , ಖುಷಿಯ ವಿಚಾರವೆಂದರೆ ,ಹೆಸರಾಂತ ಮಳಿಗೆಯೊಂದು ಪುತ್ತೂರಿನಲ್ಲಿ ಆರಂಭಗೊಂಡಿರುವುದು. ಅತ್ಯುತ್ತಮ ಶ್ರೇಣಿಯ ,ಗುಣಮಟ್ಟವುಳ್ಳ ಪಾದರಕ್ಷೆಗಳು ಎಲ್ಲಾ ವರ್ಗದ ಜನತೆಗೆ ಕೈಗೆಟಕುವಂತದಾಗಿದೆ ಎಂದು ಹೇಳಿ ,ಅಭಿನಂದಿಸಿ , ಹಾರೈಸಿದರು.
ಮಾ.ಶ್ರೀ ರಾಂ ಆಚಾರ್ಯ , ಜಿ.ಎಲ್.ಒನ್ ಮಾಲ್ ಮ್ಯಾನೇಜರ್ ಸಂತೋಷ್ ನಾಯಕ್ , ವಾಕ್ ವೇ ಏರಿಯಾ ಮ್ಯಾನೇಜರ್ ನವೀದ್ ಖಾನ್ , ಕ್ರಾಕ್ಸ್ ಕಂಪನಿ ಏರಿಯಾ ಮ್ಯಾನೇಜರ್ ನಿಸಾರ್ ಅಹಮ್ಮದ್ , ವಾಕ್ ವೇ ಸೀನಿಯರ್ ಮ್ಯಾನೇಜರ್ ಚಂದ್ರಹಾಸ ಪೂಜಾರಿ ಹಾಗೂ ಸ್ಟೋರ್ ಮ್ಯಾನೇಜರ್ ಸಂಜಯ್ ಹಾಗೂ ಸಿಬ್ಬಂಧಿಗಳು ಉಪಸ್ಥಿತರಿದ್ದರು.

ವಾಕ್ ವೇ ಪಾದರಕ್ಷೆಗಳು ದೇಶಿಯಾ ಬ್ರ್ಯಾಂಡ್ ಗಳಾಗಿದ್ದು , 60+ ಶಾಖೆಗಳಿವೆ.ಮಲ್ಟಿ ಬ್ರ್ಯಾಂಡೆಡ್ ಉತ್ಪನ್ನಗಳು ಇಲ್ಲಿದ್ದು , ಪುತ್ತೂರಿಗೆ ಪ್ರಥಮ ಶಾಖೆ ಆರಂಭಿಸಿದ್ದೇವೆ.ನಿಮ್ಮೆಲ್ಲರ ಪ್ರೀತಿ , ಬೆಂಬಲ ,ಆಶೀರ್ವಾದ ಸದಾ ಸಿಗಲಿ…
-ನವೀದ್ ಖಾನ್ -ಏರಿಯಾ ಮ್ಯಾನೇಜರ್ ವಾಕ್ ವೇ.

  • ಪ್ರಮುಖ ಕಂಪೆನಿಗಳ ಪಾದರಕ್ಷೆಗಳ ಸಂಗ್ರಹ , 60 ಕ್ಕೂ ಮಿಕ್ಕಿ ಮಳಿಗೆ.
  • ಆರಂಭಿಕ ಬೆಲೆ ರೂ.499 ರಿಂದ ಪ್ರಾರಂಭ.
  • ಮೇ. 21 ವರೆಗೆ ಆಯ್ದ ಉತ್ಪನ್ನಗಳಲ್ಲಿ 20% ರಿಯಾಯಿತಿ.
  • ವಿವರಗಳಿಗಾಗಿ ಮೊಬೈಲ್ ಸಂಖ್ಯೆ 9321985767

LEAVE A REPLY

Please enter your comment!
Please enter your name here