ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ-ವಿಶೇಷ ಉಪನ್ಯಾಸ ಕಾರ್ಯಕ್ರಮ

0

ಆಡಳಿತ ವ್ಯವಸ್ಥೆಯಲ್ಲಿ  ಭ್ರಷ್ಟಾಚಾರ ನಿಗ್ರಹದಳಗಳು ಮಹತ್ತರ ಕಾರ್ಯ ನಿರ್ವಹಿಸುತ್ತವೆ : ಶಿವಾನಂದ ಪೆರ್ಲ

ಪುತ್ತೂರು:  ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇಲ್ಲಿ  “ರಾಜಶಾಸ್ತ್ರ ವಿಭಾಗದ ವತಿಯಿಂದ “ಉತ್ತಮ ಆಡಳಿತದಲ್ಲಿ ಭ್ರಷ್ಟಾಚಾರ ನಿಗ್ರಹದಳಗಳ ಪಾತ್ರ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಮೆ.20ರಂದು ನಡೆಯಿತು.

ಬೆಂಗಳೂರು ವಿಭಾಗದ ಸಿ.ಬಿ.ಐ ಕಛೇರಿಯಲ್ಲಿ ಹಿರಿಯ ಪಬ್ಲಿಕ್ ಪ್ರಾಸಿಕ್ಯುಟರ್ ಶಿವಾನಂದ ಪೆರ್ಲ ಮಾತನಾಡಿ ಆಡಳಿತ ವ್ಯವಸ್ಥೆಯಲ್ಲಿ  ಭ್ರಷ್ಟಾಚಾರ ನಿಗ್ರಹ ದಳಗಳು ಮಹತ್ತರ ಕಾರ್ಯ ನಿರ್ವಹಿಸುತ್ತವೆ ಎಂದರು.ಭಾರತ ಆಡಳಿತ ವ್ಯವಸ್ಥೆಯಲ್ಲಿ  ಭ್ರಷ್ಟಾಚಾರ ನಿಗ್ರಹದಳಗಳ ಕಾರ್ಯ ವಿಧಾನ, ಮೊಕದ್ದಮೆಗಳ ವಿಚಾರಣೆ ಹಾಗೂ ಸಾರ್ವಜನಿಕರು ಭ್ರಷ್ಟ ಅಧಿಕಾರಿಗಳ ವಿರುದ್ಧ ಹೇಗೆ ದೂರುಗಳನ್ನು ಸಲ್ಲಿಸಬಹುದು ಎಂಬ ವಿಚಾರದ ಬಗ್ಗೆ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ವರದರಾಜ ಚಂದ್ರಗಿರಿ ವಹಿಸಿ ಅಧ್ಯಕ್ಷೀಯ ನುಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ಸಂಪನ್ಮೂಲ ವ್ಯಕ್ತಿ ಶೀವಾನಂದ ಪೆರ್ಲ ಅವರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ. ಶಾಂತಿನಾಥ ಬಾಳೋಜ , ಇತಿಹಾಸ ಪ್ರಾಧ್ಯಾಪಕ ಕೃಷ್ಣ ಮೂರ್ತಿ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಕಾಸರಗೋಡು ನಗರಸಭೆಯಲ್ಲಿ ಕಂದಾಯ ನೀರೀಕ್ಷಕ ನಾರಾಯಣ ಉಪಸ್ಥಿತರಿದ್ದರು.

ಪ್ರಾಧ್ಯಾಪಕ ಪ್ರೊ. ಮಾರಣ್ಣ ಸ್ವಾಗತಿಸಿ, ಗ್ರಂಥಪಾಲಕ ರಾಮ ಕೆ ಅತಿಥಿಗಳನ್ನು ಪರಿಚಯಿಸಿ, ಮಂಜುಷ ಪ್ರಾರ್ಥಿಸಿದರು. ಉಪನ್ಯಾಸಕರಾದ ಪ್ರೊ. ಕಿರಣ ಚಂದ್ರ ಧನ್ಯವಾದಗೈದು, ಆಶಾ ಕಾರ್ಯಕ್ರಮ ನಿರೂಪಿಸಿದರು.

IQAC ಸಹ ಸಂಚಾಲಕ ಪ್ರೊ. ಅನಂತ್ ಭಟ್, ದೈಹಿಕ ಶಿಕ್ಷಣ ನಿರ್ದೇಶಕ ಡಾ.ಪೊಡಿಯ, ಕಾಲೇಜಿನ ಉಪನ್ಯಾಸಕರು ಹಾಗೂ ಬಿ.ಎ , ಬಿ.ಎಸ್.ಡಬ್ಲೂ ಪದವಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here