ಎಂ.ಎಸ್ಸಿ. ಕೆಮೆಸ್ಟ್ರಿಯಲ್ಲಿ ಅಮಿತಾ ಲೋಬೋಗೆ ಪ್ರಥಮ ರ‍್ಯಾಂಕ್ 

0

ಪುತ್ತೂರು: ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿನಿ ವಿನೋಲಾ ಅಮಿತಾ ಲೋಬೋ ಅವರು ಕೆಮೆಸ್ಟ್ರಿ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.


ಕೆಮ್ಮಾಯಿ ‘ಲೋಬೋ ವಿಲ್ಲಾ’ದ ವಿನ್ಸೆಂಟ್ ಲೋಬೋ ಮತ್ತು 34 ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಜೆಸಿಂತ ಆನ್ಸಿ ಮಿನೇಜಸ್ ದಂಪತಿಯ ಪುತ್ರಿಯಾಗಿರುವ ವಿನೋಲ ಅಮಿತಾ ಲೋಬೋ ಅವರು ಪ್ರಾಥಮಿಕ ಶಿಕ್ಷಣವನ್ನು ಪುತ್ತೂರಿನ ಸೈಂಟ್ ವಿಕ್ಟರ್ಸ್ ಪ್ರಾಥಮಿಕ ಶಾಲೆಯಲ್ಲಿ, ಸೈಂಟ್ ವಿಕ್ಟರ್ಸ್ ವಿದ್ಯಾಸಂಸ್ಥೆಯಲ್ಲಿ ಪ್ರೌಢಶಿಕ್ಷಣವನ್ನು, ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಬಿಎಎಸ್ಸಿ ಶಿಕ್ಷಣ ಪಡೆದಿದ್ದು ಇದೀಗ ಎಂ.ಎಸ್ಸಿ. ಕೆಮಿಸ್ಟ್ರಿ ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.

LEAVE A REPLY

Please enter your comment!
Please enter your name here