ನರ್ಸರಿ ಶಿಕ್ಷಕಿ ತರಬೇತಿ ಪಡೆಯಲು ಈಶ ವಿದ್ಯಾಲಯದಲ್ಲಿ ಸುವರ್ಣಾವಕಾಶ

0

ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ದಿ ಯೋಜನೆಯಡಿ ಕೇಂದ್ರ ಯೋಜನಾ ಆಯೋಗದ ಮುಖಾಂತರ ಭಾರತ್ ಸೇವಕ್ ಸಮಾಜ್ BSS ಸುಮಾರು 500ಕ್ಕಿಂತಲೂ ಹೆಚ್ಚು ಅಲ್ಪಾವಧಿಯ ವೃತ್ತಿಪರ ಕೋರ್ಸ್‌ಗಳನ್ನು ನಡೆಸುತ್ತಿದ್ದು ಅದರಲ್ಲಿ DMED ಕೋರ್ಸ್ ಒಂದಾಗಿದೆ. ಈ ತರಬೇತಿಯು ಒಂದು ವರ್ಷ ಅವಧಿಯದ್ದಾಗಿದೆ.

ಪಿಯುಸಿ, ಇನ್ನಿತರ ಅರ್ಹತೆಯನ್ನು ಪಡೆದಂತಹ ಮಹಿಳೆಯರು ಮತ್ತು ವಿದ್ಯಾರ್ಥಿನಿಯರು ಈ ಶಿಕ್ಷಕಿ ತರಬೇತಿಯನ್ನು ಪಡೆಯಬಹುದಾಗಿದೆ. ಈ ತರಬೇತಿಗೆ ದೇಶ ವಿದೇಶಗಳಲ್ಲಿ ಬಹು ಬೇಡಿಕೆಯಿದೆ. ಆಸಕ್ತರು ಸ್ವತಃ ಬೇಬಿ ಸಿಟ್ಟಿಂಗ್, ಡೇಕ್ಯಾರ್ ಸೆಂಟರ್, ನರ್ಸರಿ ಶಾಲೆಗಳನ್ನೂ ತೆರೆಯಬಹುದಾಗಿದೆ.

ಕಳೆದ 23 ವರ್ಷಗಳಿಂದ ಪುತ್ತೂರು ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ಈಶ ವಿದ್ಯಾಲಯವು 2003 ರಿಂದ DMED ತರಬೇತಿಯನ್ನು ನಡೆಸುತ್ತಿದ್ದು ಇದುವರೆಗೆ 23 ಬ್ಯಾಚುಗಳನ್ನು ಶೇಕಡ 100 ಫಲಿತಾಂಶದೊಂದಿಗೆ ಯಶಸ್ವಿಯಾಗಿ ಪೂರೈಸಿದೆ. DMED ತರಬೇತಿಯನ್ನು ಪೂರೈಸಿದ ವಿದ್ಯಾರ್ಥಿನಿಯರಿಗೆ ಕೇಂದ್ರ ಸರಕಾರ ಕೊಡಮಾಡುವ ಸರ್ಟಿಫಿಕೇಟನ್ನು ನೀಡಲಾಗುತ್ತದೆ. ಇದರ ಆಧಾರದಲ್ಲಿ ಭಾರತದಾದ್ಯಂತ ಮತ್ತು ವಿಶ್ವದಾದ್ಯಂತ ಯಾವುದೇ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಕೆಲಸವನ್ನು ನಿರ್ವಹಿಸಬಹುದಾಗಿದೆ.

ತರಬೇತಿಯ ಅವಧಿಯಲ್ಲಿ ನಿತ್ಯತರಗತಿಗಳು ಅಲ್ಲದೆ, ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಕ್ರಿಯಾಶೀಲ ಚಟುವಟಿಕೆಗಳು, ವಿವಿಧ ತರಬೇತಿಗಳು, ಒಂದು ವರ್ಷದ ಉಚಿತ ಕಂಪ್ಯೂಟರ್ PGDCA ತರಬೇತಿ ಹಾಗೂ Spoken English ತರಬೇತಿ, 4 ದಿನಗಳ ಸಹವಾಸ ವಿಶೇಷ ಶಿಬಿರ (camp),RHYMES & STORIES,ART & CRAFT, ಕಾರ್ಯಕ್ರಮ ಸಂಯೋಜನೆ, ಮನೋವಿಕಾಸ ಆಟಗಳು, ಸಂದರ್ಶನ ಎದುರಿಸುವ ಬಗ್ಗೆ ತರಬೇತಿ, ಟೀಚಿಂಗ್ ಪ್ರಾಕ್ಟೀಸ್, ಕಮ್ಯೂನಿಟಿ ವರ್ಕ್, ಶಾಲಾ ಶೈಕ್ಷಣಿಕ ಪ್ರವಾಸ ಅಲ್ಲದೆ ಕಲೆ, ಕ್ರೀಡೆ, ಸಾಹಿತ್ಯ, ಸಮಾಜಸೇವೆಯನ್ನು ಒಳಗೊಂಡ ವಿಶೇಷ ತರಬೇತಿಗಳು ನಡೆಯುತ್ತಿದ್ದು, ಸಂಸ್ಥೆಯಲ್ಲಿ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿನಿಯರು ದೇಶ ವಿದೇಶಗಳಲ್ಲಿ ಹಾಗೂ ಕರ್ನಾಟಕ ರಾಜ್ಯದ ಶಾಲೆಗಳಲ್ಲಿ ಕಾರ‍್ಯನಿರ್ವಹಿಸುತಿದ್ದಾರೆ. ಆಸಕ್ತ ವಿದ್ಯಾರ್ಥಿಗಳಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ಶೈಕ್ಷಣಿಕ ಸಾಲದ ವ್ಯವಸ್ಥೆಯನ್ನು ಮಾಡಿಕೊಡಲಾಗುತ್ತದೆ. 2022-23ನೇ ಸಾಲಿನ ಫಲಿತಾಂಶ ಪ್ರಕಟವಾಗಿದ್ದು 20 ವಿದ್ಯಾರ್ಥಿನಿಯರಲ್ಲಿ 15 ವಿದ್ಯಾರ್ಥಿನಿಯರು ಡಿಸ್ಟಿಂಕ್ಷನ್ ಮತ್ತು 5 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಪಾಸಾಗುವುದರೊಂದಿಗೆ ಸಂಸ್ಥೆಗೆ ಸತತ 23ನೇ ಬಾರಿಗೆ 100% ಫಲಿತಾಂಶ ಲಭಿಸಿದೆ. ಆಸಕ್ತರು ಕೂಡಲೇ ದಾಖಲಾತಿಗಾಗಿ ಈಶ ವಿದ್ಯಾಲಯ ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಎದುರುಗಡೆ ಪುತ್ತೂರು ಇವರನ್ನು ಸಂಪರ್ಕಿಸಬಹುದಾಗಿದೆ. ಸೀಮಿತ ಸೀಟುಗಳು ಲಭ್ಯವಿದ್ದು ಕೂಡಲೇ ಸಂಸ್ಥೆ ಅಥವಾ ದೂರವಾಣಿ ಸಂಖ್ಯೆ 8722293944 , 9448153379 ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here