ನಿಡ್ಪಳ್ಳಿ; ರೆಂಜ ಸುಳ್ಯಪದವು ರಸ್ತೆಯ ಕೂಟೇಲು ಎಂಬಲ್ಲಿ ನೂತನವಾಗಿ ನಿರ್ಮಾಣವಾಗಿ ಇತ್ತೀಚೆಗೆ ಸಂಚಾರಕ್ಕೆ ಮುಕ್ತವಾದ ಸೇತುವೆಯ ಸಮೀಪ ರಸ್ತೆ ಬದಿ ಕಟ್ಟಿದ ತಡೆಗೋಡೆ ಮೆ.23 ರಂದು ಸುರಿದ ಬಾರಿ ಮಳೆಗೆ ಸ್ವಲ್ಪ ಭಾಗ ಕುಸಿದು ಬಿದ್ದಿದೆ.
ಈ ಹಿಂದೆ ಸುರಿದ ಮಳೆಗೆ ರಸ್ತೆ ಮತ್ತು ತಡೆಗೋಡೆ ಮಧ್ಯೆ ನೀರು ತುಂಬಿದ ಕಾರಣ ಹಾಕಿದ ಮಣ್ಣು ಹಿಂದೆಯೆ ಜಗ್ಗಿದ ಸ್ಥಿತಿಯಲ್ಲಿ ನಿಂತಿತ್ತು.ವಿಪರೀತ ಮಳೆಗೆ ಸೇತುವೆಯ ಎರಡೂ ಬದಿ ಕಟ್ಟಿದ ಕಲ್ಲಿನ ತಡೆಗೋಡೆ ಸ್ವಲ್ಪ ಭಾಗ ಕುಸಿದು ಬಿದ್ದಿದೆ. ಮಳೆ ಬಂದರೆ ಇನ್ನಷ್ಟು ಬಾಗ ಕುಸಿಯುವ ಹಂತದಲ್ಲಿದೆ.
ತಡೆಗೋಡೆ ಕಾಮಗಾರಿ ಕಳಪೆಯಾಗಿರುವುದು ಈ ರೀತಿಯ ಅನಾಹುತಕ್ಕೆ ಕಾರಣ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ.ತಡೆಗೋಡೆ ಕಾಮಗಾರಿಯ ಕಲ್ಲು ಕಟ್ಟುವ ಸಂದರ್ಭ ಸರಿಯಾಗಿ ಸಿಮೆಂಟು ಬಳಸದೆ ಕೇವಲ ಹೊಯಿಗೆ ಬಳಸಿ ಕಟ್ಟಿದ್ದಾರೆ. ಕಾಮಗಾರಿ ಸಂದರ್ಭದಲ್ಲಿ ಕೆಲವರು ಆ ಬಗ್ಗೆ ವಿಚಾರಿಸಿದಾಗ ಗುತ್ತಿಗೆದಾರರು ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದರು ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.ಗುಣಮಟ್ಟದ ಕಾಮಗಾರಿ ಮಾಡದಿದ್ದರೆ ಅನಾಹುತ ತಪ್ಪಿದ್ದಲ್ಲ ಎಂಬುದಕ್ಕೆ ಇದು ಒಂದು ಉದಾಹರಣೆ ಆಗಿದ್ದು ಇನ್ನಷ್ಟೂ ಅಪಾಯ ಸಂಭವಿಸುವ ಮೊದಲು ಸಂಬಂದಿಸಿದವರು ತಕ್ಷಣ ಗಮನ ಹರಿಸಿ ಸೂಕ್ತ ವ್ಯವಸ್ಥೆ ಮಾಡಲಿ ಎಂಬುದು ಸಾರ್ವಜನಿಕರ ಆಗ್ರಸಿದ್ದಾರೆ.