





ಭೇಟಿ ಬಳಿಕ ಕಾರ್ಯಕರ್ತರೊಬ್ಬರ ಮನೆಗೆ – ಸಂಜೆ ಬೈಠಕ್ !


ಪುತ್ತೂರು: ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ದೌರ್ಜನ್ಯಕ್ಕೊಳಗಾದ ಗಾಯಾಳುವಿನ ಆರೋಗ್ಯ ವಿಚಾರಣೆಗೆ ಹಿಂದೂ ಜಾಗರಣ ವೇದಿಕೆ ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಅವರು ಪುತ್ತೂರು ಮಹಾವೀರ ಆಸ್ಪತ್ರೆಗೆ ಮೇ 24 ರಂದು ಭೇಟಿ ನೀಡಿದರು.





ಹಲ್ಲೆಗೊಳಗಾದ ಅಭಿ ಯಾನೆ ಅವಿನಾಶ್ ಅವರ ಆರೋಗ್ಯ ವಿಚಾರಿಸಿದ ಅವರು ಬಳಿಕ ಕಾರ್ಯಕರ್ತರೊಬ್ಬರ ಮನೆಗೆ ತೆರಳಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲಿಂದ ಅವರು ಸಂಜೆ ಪಂಚವಟಿಯಲ್ಲಿ ಬೈಠಕ್ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ
ಗಾಯಾಳು ಭೇಟಿ ಸಂದರ್ಭ ಫೋಟೋ ತೆಗೆಯಲು ಜಗದೀಶ್ ಕಾರಂತ್ ನಿರಾಕರಿಸಿದ್ದಾರೆ ಎಂದು ತಿಳಿದು ಬಂದಿದೆ.








