ಗಂಧರ್ವ ಮೆಡಿಕಲ್ಸ್ ಶುಭಾರಂಭ

0

ಪುತ್ತೂರು: ಯಕ್ಷಗಾನ ಭಾಗವತ ಕೀರ್ತಿಶೇಷ ಪದ್ಯಾಣ ಗಣಪತಿ ಭಟ್ಟರವರ ಸ್ಮರಣಾರ್ಥ ಗಂಧರ್ವ ಮೆಡಿಕಲ್ಸ್ ಮೇ.24ರಂದು ಇಲ್ಲಿನ ಮಾರ್ಕೆಟ್ ರಸ್ತೆಯಲ್ಲಿರುವ ಮಹೇಶ್ವರ ಆರ್ಕೇಡ್‌ನಲ್ಲಿ ಶುಭಾರಂಭಗೊಂಡಿತು.

ನೂತನ ಮಳಿಗೆಯನ್ನು ಎಡನೀರು ಮಠದ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದೇವರಲ್ಲಿ ನಂಬಿಕೆಯಲ್ಲಿ ನಾವು ಬದುಕುವ ಧರ್ಮದವರು. ರೋಗಗಳನ್ನು ತಡೆಗಟ್ಟಲು ಔಷಧಿಯ ಜೊತೆಗೆ ದೇವರ ಅನುಗ್ರಹದ ಮುಖ್ಯವಾಗಿದೆ. ರೋಗಗಳು ಬಾರದಂತೆ ತಡೆಗಟ್ಟಲು ಹಾಗೂ ಶಮನಗೊಳಿಸಲು ಔಷಧಿಯ ಆವಶ್ಯಕತೆಯಿದ್ದು ಗಂಧರ್ವ ಮೆಡಿಕಲ್ ಮೂಲಕ ಜನರಿಗೆ ಉತ್ತಮ ಸೇವೆ ದೊರೆಯಲಿ. ಹಿರಿಯ ಯಕ್ಷಗಾನ ಭಾಗವತ ಹೆಸರಿಲ್ಲಿ ಅವರ ಪುತ್ರರು ಪ್ರಾರಂಭಿಸಿರುವ ಸಂಸ್ಥೆಗೆ ಸ್ವಾಮಿಜಿಯವರು ಉಜ್ವಳ ಭವಿಷ್ಯವನ್ನು ಹಾರೈಸಿದರು.

ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಟಿ.ಶ್ಯಾಮ್ ಭಟ್ ಮಾತನಾಡಿ, ಪುತ್ತೂರಿನಲ್ಲಿ ಪ್ರಾರಂಭಗೊAಡಿರುವ ಮೆಡಿಕಲ್ ಸುತ್ತ ಮುತ್ತಲಿನವರಿಗೂ ಉತ್ತಮ ಸೇವೆ ನೀಡುವಂತಾಗಲಿ. ಮಳಿಗೆಯಲ್ಲಿ ವೃತ್ತಿಪರ ಯಕ್ಷಗಾನ ಕಲಾವಿದರಿಗೆ ವಿಶೇಷ ರಿಯಾಯಿತಿ ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.

ಮ್ಹಾಲಕ ಸ್ವಸ್ತಿಕ್ ಪದ್ಯಾಣ ಸ್ವಾಮಿಜಿ ಹಾಗೂ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು. ತಿರುಮಲೇಶ್ವರಿ ಪದ್ಯಾಣ, ವಂಶೀ ಪದ್ಯಾಣ, ಶೀಲಾ ಗಣಪತಿ ಭಟ್, ವೀಣಾ, ಕಾರ್ತಿಕ್ ಪದ್ಯಾಣ, ಶ್ಲೋಕಾ ಪದ್ಯಾಣ ಹಿಮ್ಮೇಳ ವಾದಕ ಪದ್ಯಾಣ ಶಂಕರ ನಾರಾಯಣ ಭಟ್, ಪದ್ಯಾಣ ನಾರಾಯಣ ಭಟ್ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು. ಮಳಿಗೆಯಲ್ಲಿ ವೃತ್ತಿಪರ ಯಕ್ಷಗಾನ ಕಲಾವಿದರಿಗೆ ಮೆಡಿಕಲ್ಸ್ನಲ್ಲಿ ವಿಶೇಷ ರಿಯಾಯಿತಿ ದರದಲ್ಲಿ ಔಷಧಿ ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here