ಪುತ್ತೂರು: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅಗ್ನಿಪಥದ ಅಡಿಯಲ್ಲಿ ಅಂತಿಮ ಹಂತದ ದೈಹಿಕ ಕ್ಷಮತೆ ಮತ್ತು ವೈದ್ಯಕೀಯ ಪರೀಕ್ಷೆಯಲ್ಲಿ ಪುತ್ತೂರು ವಿದ್ಯಾಮಾತಾ ಅಕಾಡೆಮಿಯಲ್ಲಿ ತರಬೇತಿ ಮತ್ತು ಮಾರ್ಗದರ್ಶನ ಪಡೆದುಕೊಂಡಿರುವ 7 ಜನ ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.
ಅಗ್ನಿಪಥ ಯೋಜನೆಯಲ್ಲಿ 2023ರ ಸಾಲಿನಲ್ಲಿ ಭಾರತೀಯ ಭೂಸೇನೆಯು ಅರ್ಜಿಗಳನ್ನು ಆಹ್ವಾನಿಸಿ ಲಿಖಿತ ಪರೀಕ್ಷೆಯನ್ನು ಕಳೆದ ಎಪ್ರಿಲ್ ತಿಂಗಳಿನಲ್ಲಿ ನಡೆಸಿತ್ತು. ಲಿಖಿತ ಪರೀಕ್ಷೆಯ ಫಲಿತಾಂಶದ ಬಳಿಕ ಅಂತಿಮ ಹಂತದ ದೈಹಿಕ ಕ್ಷಮತೆ ಮತ್ತು ವೈದ್ಯಕೀಯ ಪರೀಕ್ಷೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿತ್ತು. ವಿದ್ಯಾಮಾತಾ ಅಕಾಡೆಮಿಯ ವಿದ್ಯಾರ್ಥಿಗಳಾದ ವಿಖ್ಯಾತ್ ಡಿ ಶೆಟ್ಟಿ, ಸೃಜನ್ ರೈ, ಸಾಕೇತ್‌ರಾಮ್ ಎ, ಮದನ್, ಮಿಥುನ್, ನಿತಿನ್ ಕುಮಾರ್, ಭವಿಷ್‌ರವರು ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಗೆ ಆಯ್ಕೆಯಾಗಿದ್ದಾರೆ.
ವಿದ್ಯಾಮಾತಾ ಅಕಾಡೆಮಿಯು 2023ನೇ ಈ ಸಾಲಿನ ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಂತಿಮ ಹಂತದ ಆಯ್ಕೆ ಪ್ರಕ್ರಿಯೆಗೆ ಆಯ್ಕೆಯಾಗಿರುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ದೈಹಿಕ ಕ್ಷಮತೆಯ ತರಬೇತಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ವಿದ್ಯಾಮಾತಾ ಅಕಾಡೆಮಿ,
ಫೋನ್ 9148935808/ 9620468869 ಸಂಪರ್ಕಿಸಬಹುದು.