ಪುತ್ತೂರು: ಪುತ್ತೂರು ಉಪ್ಪಿನಂಗಡಿ ಡಾಮಾರು ರಸ್ತೆಯಲ್ಲಿನ ಗುಂಡಿಗಳಿಗೆ ಮಣ್ಣು ತುಂಬಿಸುವ ಕೆಲಸ ನಡೆಯುತ್ತಿದ್ದು, ಇದೀಗ ಡಾಮಾರು ರಸ್ತೆ ಮಣ್ಣಿನ ರಸ್ತೆಯಂತೆ ಕಾಣುತ್ತಿದ್ದು ಎಲ್ಲಿ ನೋಡಿದರೂ ರಸ್ತೆ ಧೂಳುಮಯವಾಗಿದೆ.

ಪುತ್ತೂರು ಉಪ್ಪಿನಂಗಡಿ ರಸ್ತೆಯ ಹೊಂಡಗಳಿಗೆ ಮಳೆಯ ಸಂದರ್ಭ ತಾತ್ಕಾಲಿಕ ದುರಸ್ತಿ ನಡೆಸಲಾಗಿತ್ತು.ಇದೀಗ ಮಳೆ ಬಿಟ್ಟರೂ ಡಾಮಾರು ತೇಪೆ ಹಾಕುವುದು ಬಿಟ್ಟು ಗುಂಡಿಗಳಿಗೆ ಮಣ್ಣು ಹಾಕಿ ಮುಚ್ಚುವ ಕೆಲಸ ನಡೆಯುತ್ತಿದೆ.ಇದರಿಂದ ಘನಗಾತ್ರದ ವಾಹನಗಳು ಹೋಗುವಾಗ ಎದ್ದೇಳುವ ಧೂಳಿನಿಂದಾಗಿ ದ್ವಿಚಕ್ರ ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.ಡಾಮಾರು ರಸ್ತೆಯನ್ನು ಮಣ್ಣಿನ ರಸ್ತೆಯನ್ನಾಗಿ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.