




ಕಾಣಿಯೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ,ಹಾಲಿ ನಿರ್ದೇಶಕ, ಬೆಳಂದೂರು ಗ್ರಾ. ಪಂ. ಮಾಜಿ ಅಧ್ಯಕ್ಷ ಕರುಣಾಕರ ಪೂಜಾರಿ ಪಟ್ಟೆ ಅವರು ಮೇ.27ರಂದು ನಿಧನರಾಗಿದ್ದಾರೆ.





ಕರುಣಾಕರ ಪೂಜಾರಿ ಪಟ್ಟೆ ಅವರು ಸವಣೂರು ಸ.ಉ.ಹಿ.ಪ್ರಾ.ಶಾಲೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ರಾಜಕೀಯ, ಸಾಮಾಜಿಕ ,ಧಾರ್ಮಿಕ ಕ್ಷೇತ್ರದಲ್ಲಿಯೂ ಸಕ್ರೀಯರಾಗಿದ್ದರು.ವೃತ್ತಿಯಲ್ಲಿ PWD ಗುತ್ತಿಗೆದಾರರಾಗಿದ್ದ ಕರುಣಾಕರ ಪೂಜಾರಿ ಅವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಮೃತರು ತಾಯಿ,ಪತ್ನಿ, ಮಕ್ಕಳನ್ನು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.













