ಪುತ್ತೂರು: ಅಖಿಲಭಾರತ ತುಳು ಒಕ್ಕೂಟದ ನೇತೃತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಅಖಿಲಭಾರತ ತುಳು ಒಕ್ಕೂಟದ ಅಧ್ಯಕ್ಷ ಎ.ಸಿ.ಭಂಡಾರಿಯವರ ಮಾರ್ಗದರ್ಶನದಲ್ಲಿ ಪುತ್ತೂರಿನಲ್ಲಿ ಮಹಿಳೆಯರ ತುಳುಕೂಟ ’ತುಳು ಅಪ್ಪೆ ಕೂಟ’ದ ಸಮಿತಿ ರಚನಾ ಸಭೆಯು ವಕೀಲೆ ಹರಿಣಾಕ್ಷಿ ಜೆ. ಶೆಟ್ಟಿಯವರ ಕಛೇರಿಯಲ್ಲಿ ನಡೆಯಿತು.
ತುಳು ಅಪ್ಪೆ ಕೂಟದ ಗೌರವಾಧ್ಯಕ್ಷರಾಗಿ ಪ್ರೇಮಲತಾ ರಾವ್, ಅಧ್ಯಕ್ಷೆಯಾಗಿ ವಕೀಲೆ ಹರಿಣಾಕ್ಷಿ ಜೆ. ಶೆಟ್ಟಿ, ಉಪಾಧ್ಯಕ್ಷರಾಗಿ ಮಲ್ಲಿಕಾ ಜೆ ರೈ, ಪ್ರಧಾನ ಕಾರ್ಯದರ್ಶಿಯಾಗಿ ವಿದ್ಯಾಶ್ರೀ ಎಸ್, ಖಜಾಂಚಿಯಾಗಿ ಭಾರತಿ ವಸಂತ್, ಜೊತೆ ಕಾರ್ಯದರ್ಶಿಗಳಾಗಿ ಮಲ್ಲಿಕಾ ಗೌಡ ಅರಿಯಡ್ಕ, ಹರ್ಷಿತಾ ರೈ ಕುತ್ಯಾಡಿರರನ್ನು ಆಯ್ಕೆ ಮಾಡಲಾಯಿತು. ಗೌರವ ಸಲಹೆಗಾರರಾಗಿ ವಸಂತಲಕ್ಷ್ಮೀ ಪುತ್ತೂರು, ಕವಿತಾ ಅಡೂರು, ವೀಣಾ ತಂತ್ರಿ, ಸವಿತಾ ಎ. ರೈ ಮದಕ, ಸಂಘಟನಾಧ್ಯಕ್ಷರಾಗಿ ಶಾಂತ ಕುಂಟಿನಿ, ಸಂಘಟನಾ ಕಾರ್ಯದರ್ಶಿಗಳಾಗಿ ಸ್ಮಿತಾ ಹಣಿಯೂರು, ಅಶ್ವಿನಿ ಗೌಡ, ಸಾಂಸ್ಕೃತಿಕ ಕಾರ್ಯದರ್ಶಿ ಡಾ. ಶೋಭಿತಾ ಸತೀಶ್, ಆಂತರಿಕ ಲೆಕ್ಕ ಪರಿಶೋಧಕರಾಗಿ ಶಾರದಾ ಕೇಶವ ನಾಯ್ಕ್ ಹಾಗೂ ಸದಸ್ಯರಾಗಿ ವಿಜಯಭಾರತಿ ಅರಿಯಡ್ಕ, ಪುಷ್ಪಾವತಿ ರೈ ಅರೆಪ್ಪಾಡಿ, ಶ್ರುತಿ ರೈ, ಗೀತಾ ಗಂಗಾಧರ ಆಚಾರ್ಯ, ರಂಜಿನಿ ಶೆಟ್ಟಿ, ಸುಮನಾ ಬಲ್ಲಾಳ್, ಶಕುಂತಳ, ಲತಾ ರೈ, ಸುಪ್ರೀತಾ ರೈ, ರಕ್ಷಾ ಕುಲಾಲ್ ಆಯ್ಕೆಯಾದರು. ಸಮಿತಿ ರಚನಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಪ್ರೇಮಲತಾ ರಾವ್ ಸಹಕರಿಸಿದರು. ತುಳು ಲಿಪಿ ಶಿಕ್ಷಕಿ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯರಾದ ವಿದ್ಯಾಶ್ರೀ ಎಸ್. ಸಮಿತಿ ರಚನಾ ಸಭಾ ಪ್ರಕ್ರಿಯೆ ನಿರ್ವಹಿಸಿದರು. ಹರಿಣಾಕ್ಷಿ ಜೆ. ಶೆಟ್ಟಿ ಸ್ವಾಗತಿಸಿದರು.