ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯಿಂದ ಜಾಗತಿಕ ತಂಬಾಕು ಮುಕ್ತದಿನ-ಸಾರ್ವಜನಿಕ ಧೂಮಪಾನ ಮುಕ್ತ ಪುತ್ತೂರು ಅಭಿಯಾನಕ್ಕೆ ಚಾಲನೆ

0

ಪುತ್ತೂರು:ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಪುತ್ತೂರು ತಾಲೂಕು ಘಟಕದ ವತಿಯಿಂದ ಜಾಗತಿಕ ತಂಬಾಕು ಮುಕ್ತ ದಿನ ಹಾಗೂ ಸಾರ್ವಜನಿಕ ಧೂಮಪಾನ ಮುಕ್ತ ಪುತ್ತೂರು ಅಭಿಯಾನ-2023ಕ್ಕೆ ಚಾಲನೆ ಕಾರ್ಯಕ್ರಮಗಳು ಮೇ.31ರಂದು ತಾಲೂಕು ಆಡಳಿತ ಸೌಧದಲ್ಲಿ ನಡೆಯಿತು.


ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ತಂಬಾಕು ಸೇವಣೆ ನಿಯಂತ್ರಣಕ್ಕೆ ಸರಕಾರ ಕಾನೂನುಗಳ ಮೂಲಕ ಹಲವು ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ. ಆದರೆ ಸರಕಾರಕ್ಕೆ ಅತೀ ಹೆಚ್ಚು ಆದಾಯವಿರುವುದೇ ತಂಬಾಕು ಮಾರಾಟದಿಂದಾಗಿದೆ. ಹೀಗಾಗಿ ಜಾಗೃತಿ ಕಾರ್ಯಕ್ರಮಗಳ ಮೂಲಕ ನಿಯಂತ್ರಣಕ್ಕೆ ಪ್ರಯತ್ನಿಸಲಾಗುತ್ತಿದೆ. ಜಗಿದು ತಿನ್ನುವ ತಂಬಾಕು ಬಹಳಷ್ಟು ಅಪಾಯಕಾರಿಯಾಗಿದ್ದು ಇದರಿಂದ ಅತೀ ಹೆಚ್ಚು ಕ್ಯಾನ್ಸರ್ ಕಾಯಿಲೆ ಬರುತ್ತದೆ. ಕೆಲವರು ತಮಾಷೆಗಾಗಿ ಇನ್ನು ಕೆಲವರು ಧಣಿವು ತಣಿಸಲು ವಿಶ್ರಾಂತಿಯ ಸಂದರ್ಭದಲ್ಲಿ ಧೂಮಪಾನ ಮಾಡುವವರಿದ್ದಾರೆ. ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಜಾಗೃತಿ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸುವ ಮೂಲಕ ನಿಯಂತ್ರಿಸಬೇಕಾದ ಆವಶ್ಯಕತೆಯಿದೆ. ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸಬೇಕು ಎಂದ ಅವರು ರೆಡ್‌ಕ್ರಾಸ್ ಸಂಸ್ಥೆಯ ಅಭಿಯಾನ ಪ್ರಾರಂಭಿಸಿರುವುದು ಪ್ರಶಂಸನೀಯ. ಪ್ರತಿಯೊಬ್ಬರೂ ಇದಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.


ಮುಖ್ಯ ಅತಿಥಿಯಾಗಿದ್ದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ತಂಬಾಕು ಸೇವನೆ ನಿಯಂತ್ರಣಕ್ಕೆ ಹಲವು ಕಾನೂನುಗಳಿವೆ. ಆದರೂ ಹಲವು ಕಾರಣಗಳಿಂದ ಇದು ಅಸಾಧ್ಯವಾಗಿದೆ. ಜಾಗೃತಿ ಮೂಡಿಸುವುದೇ ಅತೀ ಮುಖ್ಯವಾಗಿದೆ ಎಂದರು.ತಹಶೀಲ್ದಾರ್ ಶಿವಶಂಕರ್ ಸಂದರ್ಭೋಚಿತವಾಗಿ ಮಾತನಾಡಿದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಪುತ್ತೂರು ಘಟಕದ ಸಭಾಪತಿ ಸಂತೋಷ್ ಶೆಟ್ಟಿ ಎಸ್. ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಸಕರಿಗೆ ಅಭಿನಂದನೆ:
ನೂತನ ಶಾಸಕರಾಗಿ ಆಯ್ಕೆಯಾದ ಅಶೋಕ್ ಕುಮಾರ್ ರೈಯವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ, ಅಭಿನಂದಿಸಲಾಯಿತು.
ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯಕ್ರಮ ಸಂಯೋಜನಾ ಉಪಸಮಿತಿ ಮುಖ್ಯಸ್ಥ ಪ್ಯಾಟ್ರಿಕ್ ಸಿಪ್ರಿಯನ್ ಮಸ್ಕರೇನಸ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಆಸ್ಕರ್ ಆನಂದ್ ವಂದಿಸಿದರು.

LEAVE A REPLY

Please enter your comment!
Please enter your name here