
ಕಾಣಿಯೂರು: ಪಡುಕುತ್ಯಾರು ಮಹಾ ಸಂಸ್ಥಾನದ ಶ್ರೀ ಸರಸ್ವತಿ ಸತ್ಸಂಗ ಮಂದಿರದಲ್ಲಿ ನಡೆದ ಆನೆಗುಂದಿ ಮಹಾಸಂಸ್ಥಾನದ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳ 13ನೇ ವರ್ಷದ ವರ್ಧಂತ್ಯುತ್ಸವ ಕಾರ್ಯಕ್ರಮದಲ್ಲಿ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನದ ಪಡುಕುತ್ಯಾರು ಕಟಪಾಡಿ ಇದರ ವತಿಯಿಂದ ಕೊಡಮಾಡುವ 2023ನೇ ಸಾಲಿನ ಆನೆಗುಂದಿ ಶ್ರೀ ಪ್ರಶಸ್ತಿಯನ್ನು ಜ್ಯೋತಿಷ್ಯರಾದ ಪುತ್ತೂರಿನ ಮರೀಲು ವಿಘ್ನೇಶ್ವರ ಭಟ್ ಅವರಿಗೆ ಪಡುಕುತ್ಯಾರು ಆನೆಗುಂದಿ ಮಹಾಸಂಸ್ಥಾನದ ಸರಸ್ವತೀ ಪೀಠಾಧೀಶ್ವರ ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಶ್ರೀಯವರು ಪ್ರದಾನ ಮಾಡಿದರು.