ಪ್ರಕಾಶ್ ಫೂಟ್‌ವೇರ್‌ನಿಂದ 15 ಲಕ್ಷ ರೂ.ನಗದು ಕಳವು ಪ್ರಕರಣ-ಇಬ್ಬರು ಆರೋಪಿಗಳ ಬಂಧನ

0

8 ತಿಂಗಳ ಹಿಂದೆ ನಡೆದ ಕೃತ್ಯ
ನಗದು ಕಳವು ಮಾಡಿ, ಸಿಸಿ ಕ್ಯಾಮರಾ ಡಿವಿಆರ್‌ನೊಂದಿಗೆ ಬಸ್‌ನಲ್ಲಿ ಊರಿಗೆ ತೆರಳಿದ್ದರು
ಬಾಲಾಪರಾಧಿಗಳಾಗಿದ್ದು ವಿಚಾರಣೆಗೆ ಮಂಗಳೂರು ಕೋರ್ಟ್ಗೆ ಬಂದವರ ಕೃತ್ಯ
ಕಳವು ಮಾಡಿದ್ದ ಹಣದಲ್ಲಿ ಐಶಾರಾಮಿ ಸೊತ್ತುಗಳನ್ನು ಖರೀದಿಸಿದ್ದರು

ಪುತ್ತೂರುನಲ್ಲಿ ಭಿಕ್ಷೆ ಬೇಡುತ್ತಿದ್ದು ಬಾಲಾಪರಾಧಿಗಳಾಗಿದ್ದವರು..
ಬಂಧಿತ ಆರೋಪಿಗಳು ಬಾಲ್ಯಾವಸ್ಥೆಯಲ್ಲಿ ಪುತ್ತೂರು ಆಸುಪಾಸಿನಲ್ಲಿ ಭಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಿದ್ದರು.ಆ ಸಂದರ್ಭ ಅಪರಾಧ ಪ್ರಕರಣಗಳಲ್ಲಿ ತೊಡಗಿಸಿಕೊಂಡು ಬಾಲಾಪರಾಧಿಗಳಾಗಿದ್ದರು.ಯಾವುದೋ ಪ್ರಕರಣದ ವಿಚಾರಣೆಗಾಗಿ ಮಂಗಳೂರು ನ್ಯಾಯಾಲಯಕ್ಕೆ ಬಂದಿದ್ದ ಆರೋಪಿಗಳು ಪುತ್ತೂರುಗೆ ಬಂದು ಕಳವು ಮಾಡಿ ನೇರವಾಗಿ ಊರಿಗೆ ತೆರಳಿದ್ದರು ಎನ್ನುವ ವಿಚಾರ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಪುತ್ತೂರು: 8 ತಿಂಗಳ ಹಿಂದೆ ಪುತ್ತೂರು ಮುಖ್ಯರಸ್ತೆ ಮಾಯಿದೆ ದೇವುಸ್ ಚರ್ಚ್ ಬಳಿಯ, ಮೊಹಮ್ಮದ್ ಶಮೀರ್ ಮಾಲಕತ್ವದ ಪ್ರಕಾಶ್ ಫೂಟ್‌ವೇರ್ ಕೋ ಅಂಗಡಿಯಿಂದ ಸುಮಾರು 15 ಲಕ್ಷ ರೂ. ನಗದು ಕಳವು ಮಾಡಿ ಸಿಸಿ ಕ್ಯಾಮರಾ ಡಿವಿಆರ್‌ನ್ನೂ ಹೊತ್ತೊಯ್ದ ಘಟನೆಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಪುತ್ತೂರು ಪೊಲೀಸರು ಬಂಽಸಿದ್ದಾರೆ.ದಾವಣಗೆರೆ ದೇವಾನಗಿರಿ ದೇವರಾಜು ಅರಸು ಬಡಾವಣೆಯ ಸಮೀರ್ ಯಾನೆ ಕಪ್ಪ(22ವ) ಮತ್ತು ಹಾಸನ ಸಕಲೇಶಪುರದ ಶಂಕರಿಪು ನಿವಾಸಿ ಚಂದ್ರಶೇಖರ್ ಯಾನೆ ಚಂದು(24ವ) ಬಂಧಿತ ಆರೋಪಿಗಳು.

ಆರೋಪಿಗಳನ್ನು ಮೇ 29ರಂದು ಪುತ್ತೂರು ನೆಲ್ಲಿಕಟ್ಟೆ ಬಳಿ ಬಂಧಿಸಲಾಗಿತ್ತು.ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಎರಡು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ಆರೋಪಿಗಳ ವಿಚಾರಣೆ ನಡೆಸಲಾಗಿತ್ತು.ಕಳವು ಮಾಡಿದ್ದ ಹಣದಲ್ಲಿ ಐಷಾರಾಮಿ ವಸ್ತುಗಳನ್ನು ಖರೀದಿಸಿದ್ದನ್ನು ವಿಚಾರಣೆ ವೇಳೆ ಆರೋಪಿಗಳ ಬಾಯ್ಬಿಟ್ಟಿದ್ದರು.ಬಳಿಕ ಆರೋಪಿಗಳ ಮನೆಗೆ ತೆರಳಿ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.ಪೊಲೀಸ್ ಕಸ್ಟಡಿ ಅವಽ ಮುಗಿದ ಬಳಿಕ ಜೂ.೧ರಂದು ಆರೋಪಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಽಸಲಾಗಿದೆ.

ಕಳವು ನಡೆದ ಘಟನೆ ವಿವರ: 2022ನೇ ಸೆ.15ರಂದು ಪ್ರಕಾಶ್ -ಫೂಟ್‌ವೇರ್ ಕೋ ಸಂಸ್ಥೆಯ ಅಂಗಡಿಯ ಛಾವಣಿಯ ಹೆಂಚು ತೆಗೆದು ಒಳ ನುಗ್ಗಿದ ಕಳ್ಳರು ಅಂಗಡಿಯಲ್ಲಿ ಡ್ರಾವರ್‌ನಲ್ಲಿದ್ದ ಚಪ್ಪಲಿ ವ್ಯಾಪಾರದ ರೂ. 24,500 ನಗದು ಮತ್ತು ಇನ್ನೊಂದು ಡ್ರಾವರ್‌ನಲ್ಲಿದ್ದ ರೂ.14.50 ಲಕ್ಷ ನಗದು ಹಣವನ್ನು ಮತ್ತು ರೂ.10 ಸಾವಿರ ಮೌಲ್ಯದ ಸಿಸಿ ಕ್ಯಾಮರಾದ ಡಿವಿಅರ್‌ನ್ನು ಕಳವು ಮಾಡಿದ್ದರು.

ಪ್ರಕಾಶ್ ಫೂಟ್‌ವೇರ್ ಕೋ ಸಂಸ್ಥೆಯ ಮಾಲಕ ಮೊಹಮ್ಮದ್ ಶಮೀರ್ ಅವರು ಬೆಂಗಳೂರಿನಿಂದ ಹಳೆಯ ಕಾರುಗಳನ್ನು ಖರೀದಿಸಿ ತಂದು ಪುತ್ತೂರಿನಲ್ಲಿ ಮಾರಾಟ ಮಾಡುವ ವ್ಯವಹಾರ ನಡೆಸುತ್ತಿದ್ದರು.ಅವರು ಸೆ.15ರಂದು ತನ್ನಲ್ಲಿದ್ದ ರೂ.8 ಲಕ್ಷ ನಗದು ಮತ್ತು ಸ್ನೇಹಿತ ಸಿದ್ದಿಕ್ ಅವರು ನೀಡಿದ್ದ ರೂ.7 ಲಕ್ಷ ನಗದನ್ನು ಒಟ್ಟು ಸೇರಿಸಿ ಚಪ್ಪಲಿ ವ್ಯಾಪಾರ ಮಾಡುತ್ತಿರುವ ಅಂಗಡಿಯ ಕ್ಯಾಶ್ ಡ್ರಾವರ್ ಹಿಂಬದಿಯ ಇನ್ನೊಂದು ಮರದ ಬಾಕ್ಸ್ನಲ್ಲಿ ಇಟ್ಟಿದ್ದರು.ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ ತಾಜುದ್ದೀನ್ ಎಂಬವರು ಸೆ.16ರಂದು ಬೆಳಿಗ್ಗೆ ಅಂಗಡಿಯನ್ನು ತೆರೆದಾಗ ಅಂಗಡಿಯ ಡ್ರಾವರ್‌ನಲ್ಲಿದ್ದ ರೂ.24,500 ಮತ್ತು ಮರದ ಬಾಕ್ಸ್ನಲ್ಲಿಟ್ಟಿದ್ದ ರೂ.14.50 ಲಕ್ಷ ಮತ್ತು ರೂ.10 ಸಾವಿರ ಮೌಲ್ಯದ ಸಿಸಿ ಕ್ಯಾಮರಾದ ಡಿವಿಆರ್ ಕಳವಾಗಿರುವುದು ಬೆಳಕಿಗೆ ಬಂದಿತ್ತು.ಘಟನೆಗೆ ಸಂಬಂಧಿಸಿ ಮೊಹಮ್ಮದ್ ಶಮೀರ್ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದರು.ಆರಂಭದಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಶ್ವಾನದಳದಿಂದ ಕಳ್ಳರ ಜಾಡು ಹಿಡಿಯುವ ಪ್ರಯತ್ನ ನಡೆಸಲಾಗಿತ್ತು.ಶ್ವಾನ ತುಸುದೂರ ತನಕ ತೆರಳಿ ನಿಂತಿತ್ತು.ಬೆರಳಚ್ಚು ತಜ್ಞರು ಅಂಗಡಿಯಲ್ಲಿ ಕೆಲವೊಂದು ಪ್ರಮುಖ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದರು.

ಕಳವುಗೈದು ಬಸ್‌ನಲ್ಲೇ ಪರಾರಿಯಾದ ಕಳ್ಳರು: ಫೂಟ್‌ವೇರ್ ಅಂಗಡಿಯಿಂದ ನಗದು ಕಳವುಗೈದ ಸಮೀರ್ ಮತ್ತು ಚಂದ್ರಶೇಖರ್ ಅವರು ಬೆಳ್ಳಂಬೆಳಗ್ಗೆ ಪುತ್ತೂರು ಬಸ್ ನಿಲ್ದಾಣದಿಂದ ಬೆಂಗಳೂರಿಗೆ ತೆರಳುವ ಬಸ್‌ನಲ್ಲಿ ಹಾಸನಕ್ಕೆ ತೆರಳಿದ್ದರು.ಅದಾದ ಬಳಿಕ ಅವರು ಪುತ್ತೂರಿಗೆ ಮರಳಿ ಬರಲಿಲ್ಲ.ಕಳ್ಳರನ್ನು ಬೆನ್ನಟ್ಟಿದ್ದ ಪೊಲೀಸರು ಆಗಿನ ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್ ಅವರ ಮಾರ್ಗದರ್ಶನದಲ್ಲಿ ಕಳ್ಳರ ಪತ್ತೆ ಕಾರ್ಯಕ್ಕೆ ತಂಡ ರಚನೆ ಮಾಡಿ ಹಾಸನ ಮತ್ತು ಕೇರಳದಲ್ಲಿ ಕಾರ್ಯಾಚರಣೆ ನಡೆಸಿದ್ದರು.ಪುತ್ತೂರಿನ ಹಲವು ಕಡೆ ಸಿಸಿ ಕ್ಯಾಮರಾ ಪರಿಶೀಲಿಸಿದ್ದರು.ಈ ನಡುವೆ ಕಳ್ಳರ ಮೊಬೈಲ್ ಜಾಡು ಹಿಡಿದ ಪೊಲೀಸರು ಹಾಸನಕ್ಕೆ ತೆರಳಿ ಪತ್ತೆ ಕಾರ್ಯ ನಡೆಸಿದ್ದರು.ಆರೋಪಿಗಳು ಮೇ 29ಕ್ಕೆ ಪುತ್ತೂರಿಗೆ ಬರುತ್ತಿದ್ದ ವೇಳೆ ಗಸ್ತು ನಿರತ ಪೊಲೀಸರು ಅನುಮಾನದೊಂದಿಗೆ ವಿಚಾರಿಸಿದಾಗ ಕಳವು ಮಾಡಿರುವ ಕುರಿತು ಬಾಯ್ಬಿಟ್ಟರು.ಈ ವೇಳೆ ಪೊಲೀಸರು ಅವರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.ಬಂಽತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗಾಗಿ ಎರಡು ದಿನದವಽಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಪೊಲೀಸರು ವಿಚಾರಣೆ ಮುಂದುವರಿಸಿದ್ದರು.

LEAVE A REPLY

Please enter your comment!
Please enter your name here