ಪುತ್ತೂರು: ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಉತ್ತಮ ಗುಣಮಟ್ಟದ ಶಿಕ್ಷಣದಿಂದ ಪಡೆಯಲು ಸಾಧ್ಯ. ವಿದ್ಯಾರ್ಥಿಗಳೆಲ್ಲರೂ ವಿದ್ಯೆಯ ಪ್ರಾಮುಖ್ಯತೆಯನ್ನು ಅರಿತು ಅದರ ಸದುಪಯೋಗವನ್ನು ಪಡೆಯಬೇಕು. ಈ ಮೂಲಕ ದೇವರ ಅನುಗ್ರಹ ಪ್ರಾಪ್ತಿಯಾಗಲಿ ಎಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಕಾಂತ ಕೊಳತ್ತಾಯ ಶುಭಹಾರೈಸಿದರು.
ನರೇಂದ್ರ ಪ.ಪೂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಪ್ರಾರಂಭೋತ್ಸವದಲ್ಲಿ ಅವರು ಮಾತನಾಡಿದರು. ಪ್ರಾರಂಭೋತ್ಸವದ ಅಂಗವಾಗಿ ಗಣಹೋಮ ಮತ್ತು ಸರಸ್ವತಿ ಪೂಜೆ ಕಾರ‍್ಯಕ್ರಮವು ಜೂ.1 ರಂದು ಕಾರ್ತಿಕ್ ಶಾಸ್ತ್ರಿ, ಶಶಿಕಾಂತ ಭಟ್, ಪ್ರಕಾಶ್ ಭಟ್ ಇವರ ನೇತೃತ್ವದಲ್ಲಿ ನಡೆಯಿತು.
ಕಾರ‍್ಯಕ್ರಮದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕರಾದ ಸಂತೋಷ ಬಿ., ಸದಸ್ಯರಾದ ಸಂಪತ್ ಕುಮಾರ್, ಸೂರ‍್ಯನಾಥ ಆಳ್ವ, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್, ಉಪನ್ಯಾಸಕರು, ಪೋಷಕರು, ಸಿಬ್ಬಂದಿ ವರ್ಗ ಮತ್ತು ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.